ಕಟೀಲು ದೇವಳ ಸರ್ವ ಅಬಿವೃದ್ಧಿಗೆ ಮಾಸ್ಟರ್ ಪ್ಲಾನ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಟೀಲು ದೇವಸ್ಥಾನದ ಭೋಜನೆ ಶಾಲೆಗೆ ನೂತನ ಕಟ್ಟಡ, ಯಾತ್ರಿ ನಿವಾಸ, ರಥಬೀದಿಯಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ಸೇತುವೆ ಅಗಲಗೊಳಿಸುವಿಕೆಯ ಸಹಿತ ಸರ್ವಾಂಗೀಣ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಅವರ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರ ಜತೆಗೆ ಮಾತನಾಡಿದರು.

ಶಾಲಾ ಕಾಲೇಜಿನ ಸಮಸ್ಯೆ, ಯಾತ್ರಿ ನಿವಾಸಕ್ಕೆ ಚಾಲನೆ, ದೇವಸ್ಥಾನದ ಸಂಪರ್ಕ ಸೇತುವೆ ಅಗಲಗೊಳಿಸುವಿಕೆ ಬಗ್ಗೆ ಸಚಿವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು. ದೇವಸ್ಥಾನವನ್ನು ಸಂಪರ್ಕಿಸುವ ಎರಡು ಕಿರು ಸೇತುವೆಗಳಿದ್ದು ದೇವಳಕ್ಕೆ ಬರುವ ಭಕ್ತರಿಗೆ ಸಂಚರಿಸಲು ಕಷ್ಟವಾಗುತ್ತಿದ್ದು, ಅದನ್ನು ಅಗಲಗೊಳಿಸುವ ಯೋಜನೆಯನ್ನು ಮಾಡಬೇಕಾಗಿದೆ ಎಂದು ಸ್ಥಳೀಯರು ಮನವಿ ಸಲ್ಲಿಸಿದರು. ಎಲ್ಲದಕ್ಕೂ ಭರವಸೆ ನೀಡಿದ ಸಚಿವರು, ಬಳಿಕ ದೇವಸ್ಥಾನದ ವಸಂತ ಮಟಂಪ, ಯಾಗ ಶಾಲೆ, ಚಿನ್ನದ ರಥ ಹಾಗೂ ಭೋಜನ ಶಾಲೆ ವೀಕ್ಷಿಸಿ ರಾತ್ರಿಯ ಅನ್ನ ಪ್ರಸಾದ ಸ್ವೀಕರಿಸಿದರು.

ಸಚಿವರ ಜೊತೆಗಿದ್ದ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, “ಸಿ ಆರ್ ಫ್ ಯೋಜನೆಯಡಿಯಲ್ಲಿ ಬÉೈಪಾಸ್ ರಸ್ತೆಯ ಅಗಲಿಕರಣ, 2 ಕೋಟಿ ರೂ ವೆಚ್ಚದಲ್ಲಿ ಕಟೀಲು ಬÉೈಪಾಸ್ ರಸ್ತೆ, ಕಿನ್ನಿಗೋಳಿ ಕಟೀಲು, ಉಲ್ಲಂಜೆ ರಸ್ತೆ ಅಬಿವೃದ್ಧಿ  ಪಡಿಸಲಾಗುವುದು, ಯಾತ್ರಿ ನಿವಾಸದ ಬಗ್ಗೆ ಹಾಗೂ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಜತೆಗೂ ಪ್ರಸ್ತಾಪ ಮಾಡಲಾಗುವುದು” ಎಂದು ಹೇಳಿದರು.