ವಿವಾಹಿತೆ ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ನಿಟ್ಟೂರು ವಿಷ್ಣುಮೂರ್ತಿ ದೇವಳ ಬಳಿಯ ಶಾರದಾನಿಲಯ ನಿವಾಸಿಯಾದ ವಿವಾಹಿತೆಯೊಬ್ಬಳು ನಾಪತ್ತೆಯಾಗಿದ್ದಾಳೆ.

ದಿನೇಶ್ ಪೂಜಾರಿ ಎಂಬವರ ಪತ್ನಿ ಜ್ಯೋತಿ ಪೂಜಾರಿ ನಾಪತ್ತೆಯಾದವಳು. ಈಕೆ ಮನೆ ಸಮೀಪದ ಸುಶೀಲಾ ಗಾಣಿಗ ಎಂಬಾಕೆ ಮನೆಯಲ್ಲಿ ನಡೆಯುತ್ತಿರುವ ಸಂಘದ ಸಭೆಗೆಂದು ಮನೆಯಿಂದ ಹೋಗಿದ್ದು, ವಾಪಸ್ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗಂಡ ದಿನೇಶ್ ಪೂಜಾರಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY