ವಿವಾಹಿತ ಪಾದ್ರಿಗಳು ಚರ್ಚುಗಳ ಕೊರತೆ ತುಂಬುವುದಿಲ್ಲ ಏಕೆ ?

ವಿವಾಹಿತರಾಗಿದ್ದೂ ವೈವಾಹಿಕ ಜೀವನದಿಂದ ದೂರ ಇರುವುದು ವ್ಯಕ್ತಿಗತ ಆಯ್ಕೆಯಾಗಿದ್ದು ಈ ನಿಟ್ಟಿನಲ್ಲಿ ಯಾವುದೇ ಒತ್ತಡ ಹೇರಲಾಗದು ಎಂದು ಪೋಪ್ ಹೇಳಿದ್ದಾರೆ.

ವಾಷಿಂಗ್‍ಟನ್ : ಅಮೆರಿಕದಲ್ಲಿ 1970ರಲ್ಲಿ ಪ್ರತಿ 800 ಕ್ಯಾಥೊಲಿಕರಿಗೆ   ಒಬ್ಬ ಪಾದ್ರಿ ಇರುತ್ತಿದ್ದರು. ಇಂದು ಇದು ಇಮ್ಮಡಿಯಾಗಿದ್ದು ಪ್ರತಿ 1800 ಕ್ಯಾಥೊಲಿಕ್ ಕ್ರೈಸ್ತರಿಗೆ ಒಬ್ಬ ಪಾದ್ರಿ ಇದ್ದಾರೆ. 1980ರಲ್ಲಿ  1895ರಷ್ಟಿದ್ದ ಪಾದ್ರಿಗಳ ಸಂಖ್ಯೆ 2012ರ ವೇಳೆಗೆ 3126 ತಲುಪಿದೆ ಎಂದು ಜಾರ್ಜ್ ಟೌನ್ ವಿಶ್ವವಿದ್ಯಾಲಯದ ವರದಿಯೊಂದು ಹೇಳಿದೆ.

ಕಳೆದ ವಾರ ಪೋಪ್ ಫ್ರಾನ್ಸಿಸ್ ಸಹ ಪಾದ್ರಿಗಳ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಪೋಪ್ ಫ್ರಾನ್ಸಿಸ್ ವಿವಾಹಿತ ಪಾದ್ರಿಗಳಿಗೂ ಚರ್ಚ್‍ಗಳಲ್ಲಿ ಅವಕಾಶ ನೀಡಲು ಒಪ್ಪಿದ್ದರು. ವಿವಾಹಿತರಾಗಿದ್ದೂ ವೈವಾಹಿಕ ಜೀವನದಿಂದ ದೂರ ಇರುವುದು ವ್ಯಕ್ತಿಗತ ಆಯ್ಕೆಯಾಗಿದ್ದು ಈ ನಿಟ್ಟಿನಲ್ಲಿ ಯಾವುದೇ ಒತ್ತಡ ಹೇರಲಾಗದು ಎಂದು ಪೋಪ್ ಹೇಳಿದ್ದಾರೆ.

ಕ್ಯಾಥೊಲಿಕ್ ಚರ್ಚುಗಳಲ್ಲಿ ಧಾರ್ಮಿಕ ಕೆಲಸದಲ್ಲಿ ತೊಡಿಗಿರುವವರು ಬ್ರಹ್ಮಚರ್ಯ ಪಾಲಿಸುವುದು ಪಾರಂಪರಿಕವಾಗಿ ನಡೆದುಬಂದಿರುವ ಒಂದು ಪದ್ಧತಿ. ಈ ಪದ್ಧತಿಯ ಮೂಲವನ್ನು ಏಸುಕ್ರಿಸ್ತನಲ್ಲೇ ಪ್ರಪ್ರಥಮವಾಗಿ ಕಾಣಬಹುದು.  ಆದರೆ ಕ್ರೈಸ್ತ ಸಾಹಿತ್ಯದಲ್ಲಿ ಎಲ್ಲಿಯೂ ಸಹ ಕ್ರಿಸ್ತನ ಪ್ರಸ್ತಾವನೆ ಬರುವುದೇ ಇಲ್ಲ. ಚರ್ಚ್‍ಗಳಲ್ಲಿ ಬ್ರಹ್ಮಚರ್ಯಕ್ಕೆ ಹೆಚ್ಚಿನ ಮೌಲ್ಯ ಇರಲು ಮತ್ತೊಂದು ಮುಖ್ಯ ಕಾರಣ ಎಂದರೆ ಬ್ರಹ್ಮಚರ್ಯ ಲೌಕಿಕ ಜಗತ್ತಿಗಿಂತಲೂ ಉನ್ನತ ಸ್ಥಾನ ಪಡೆಯುತ್ತದೆ.

ಆದರೂ ಕೆಲವು ದೇಶಗಳ ಕ್ಯಾಥೊಲಿಕ್ ಚರ್ಚುಗಳಲ್ಲಿ ವಿವಾಹಿತ ಪಾದ್ರಿಗಳನ್ನು ಕಾಣಬಹುದು.  ಫಾದರ್ ಡಗ್ಲಾಸ್ ಗ್ರಾಂಡ್ಸನ್ ವಿವಾಹವಾದ 14 ವರ್ಷದ ನಂತರ ಪೋಪ್ ಬೆನೆಡಿಕ್ಟ್ ಅವರ ಅನುಮತಿ ಪಡೆದು ಪಾದ್ರಿಯ ಹುದ್ದೆ ಅಲಂಕರಿಸಿದ್ದರು.

ಆದರೆ ಬ್ರಹ್ಮಚರ್ಯವನ್ನು ಒಂದು ಮಾನದಂಡದಂತೆ ಪರಿಗಣಿಸುವುದರಿಂದ ಕ್ಯಾಥೊಲಿಕ್ Zಚುರ್ïಗಳಲ್ಲಿ ಪಾದ್ರಿಗಳ ಸಂಖ್ಯೆ ಕ್ಷೀಣಿಸುತ್ತಿದೆ. 40,29,336 ಕ್ಯಾಥೊಲಿಕ್ ಜನಸಂಖ್ಯೆ ಇರುವ ಲಾಸ್ ಏಂಜಲಿಸ್ ಆರ್ಚ್ ಡಯೋಸಿಸ್ Zರ್ಚಿನಲ್ಲಿ ಕೇವಲ 1051 ಪಾದ್ರಿಗಳಿದ್ದು ಪ್ರತಿ 3833 ಕ್ಯಾಥೊಲಿಕರಿಗೆ ಒಬ್ಬ ಪಾದ್ರಿ ಇದ್ದಾರೆ. ಅಮೆರಿಕ ದೇಶದಾದ್ಯಂತ ಈ ಸಮಸ್ಯೆ ಇದೆ.

ವಿವಾಹಿತ ಪಾದ್ರಿಗಳನ್ನು ನೇಮಿಸುವುದು ಈ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂದು ಪೋಪ್ ಫ್ರಾನ್ಸಿಸ್ ಸಹ ನಂಬುವುದಿಲ್ಲ. ಈಗಿನ ಪರಿಸ್ಥಿತಿಯನ್ನು ಪಾದ್ರಿಗಳ ಕೊರತೆ ಎಂದು ಹೇಳಲಾಗುವುದಿಲ್ಲ ಎಂದು ಕ್ಯಾಥೊಲಿಕ್ ಚರ್ಚ್ ಮುಖ್ಯಸ್ಥರು ಹೇಳುತ್ತಾರೆ.

ಆದರೂ ಪಾದ್ರಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿವಾಹಿತ ಪಾದ್ರಿಗಳ ಬ್ರಹ್ಮಚರ್ಯ ಪಾಲನೆಯ ಆಧಾರದ ಮೇಲೆ ಪರಿಹಾರ ಮಾರ್ಗ ಕಂಡುಹಿಡಿಯಲು ಕ್ಯಾಥೊಲಿಕ್ ಚರ್ಚ್ ಪ್ರಯತ್ನಿಸುತ್ತಿದೆ.