`ಮದುವೆ ಆಗ್ತೇನೆ, ಯಾಕೆಂದರೆ ನನಗದು ಬೇಕು’ : ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ಈಗ ಸದ್ಯಕ್ಕೆ ಸಿಂಗಲ್ ಆಗಿದ್ದಾಳೆ. ಆಕೆ ಮಿಂಗಲ್ ಆಗಲು ಹಾತೊರೆಯುತ್ತಿದ್ದಾಳೆ. ಅದರೇನು, ಆಕೆಗಿನ್ನೂ ತನ್ನ ಇಡೀ ಜೀವನವನ್ನು ಜೊತೆಯಾಗಿ ಕಳೆಯಬಲ್ಲಂತಹ ಹುಡುಗ ಇನ್ನೂ ಸಿಕ್ಕಿಲ್ಲ.

ಕಳೆದ ವಾರ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ತಾನು ಕಳೆದ ವರ್ಷದವರೆಗೆ ಒಬ್ಬನ ಜೊತೆ ಸೀರಿಯಸ್ ಸಂಬಂಧದಲ್ಲಿ ಇದ್ದು ಅದೇನೋ ಕಾರಣದಿಂದ ಆ ರಿಲೇಶನ್ಶಿಪ್ ಮುರಿದು ಹೋದ ಬಗ್ಗೆ ಹೇಳಿಕೊಂಡಿದ್ದಳು. ಆ ಸಂದರ್ಭದಲ್ಲಿ ಪ್ರಿಯಾಂಕಾ ತನ್ನ ಈಗಿನ ಮನಸ್ಥಿತಿ ಹಾಗೂ ಮುಂದಿನ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿದ್ದಾಳೆ.

ಪ್ರಿಯಾಂಕಾ ಬಳಿ ಸಂದರ್ಶಕರು “ದೂರ ಎನ್ನುವುದು ನೋವು ಮರೆಸಲು ಸುಲಭವಾಗಿರಬಹುದಲ್ವಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ “ಹೃದಯದ ನೋವಿಗೂ ದೂರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸಮಸ್ಯೆ ಬಂದರೆ ಅದರಿಂದ ಓಡಿಹೋಗದೇ ಅದನ್ನು ಎದುರಿಸಲು ಬಯಸುತ್ತೇನೆ. ಹೃದಯಕ್ಕೆ ಯಾವುದರಿಂದ ನೋವಾಗುತ್ತದೆ ಎಂದು ಮೊದಲು ಅರ್ಥಮಾಡಿಕೊಂಡು ಅದರಿಂದ ಹೊರಬರಲು ಯತ್ನಿಸಬೇಕಾಗುತ್ತದೆ. ಈಗ ನಾನು ಆ ನೋವಿನಿಂದ ಹೊರಬಂದಿದ್ದೇನೆ. ಇದೀಗ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ. ಮುಂದಿನ ಸಂಬಂಧ ಹೊಂದುವಾಗ ಹಿಂದಿನ ಅನುಭವ ಪ್ರಯೋಜನಕ್ಕೆ ಬರಲಿದೆ.” ಎಂದಿದ್ದಾಳೆ. ಅದಲ್ಲದೇ ಪ್ರಿಯಾಂಕಾ ತಾನೀಗ ಮುಂದಿನ ಜೀವನಕ್ಕೆ ತಯಾರಾಗಿದ್ದೇನೆ ಎಂದೂ ಹೇಳಿಕೊಂಡಿದ್ದಾಳೆ. ಬ್ರೇಕಪ್ ಆದ ನಂತರ ಮೊದಮೊದಲು ವಿಚಿತ್ರವೆನಿಸುತ್ತಿತ್ತು. ನಾನು ಯಾರ ಬಗ್ಗೆಯೂ ಯೋಚನೆ ಮಾಡುವ ಅಗತ್ಯವಿಲ್ಲ, ನನಗೆ ಬೇಕಾದ ರೀತಿಯಲ್ಲಿ ಇರಬಹುದು ಎನ್ನುವ ನಿರಾಳ ಭಾವದಿಂದ ಹೇಳಿರುವ ಪಿಗ್ಗಿ ಈಗ ಜೀವನವನ್ನು ಹೇಗೆ ಬಂತೋ ಹಾಗೆ ಸ್ವೀಕರಿಸಲು ರೆಡಿಯಾಗಿದ್ದಾಳೆ.

ಪ್ರಿಯಾಂಕಾ ಈ ಸಂದರ್ಶನದಲ್ಲಿ ತನ್ನ ಮದುವೆಯ ಕನಸಿನ ಬಗ್ಗೆಯೂ ಹೇಳಿಕೊಂಡಿದ್ದಾಳೆ. “ನನ್ನ ಹಲವು ಜನ ಫ್ರೆಂಡ್ಸ್ ಈಗ ಮದುವೆಯಾಗಿ ಮಕ್ಕಳ ಜೊತೆ ಸುಂದರ ಜೀವನವನ್ನು ನಡೆಸುತ್ತಿದ್ದಾರೆ. ನನಗೂ ಅಂತದ್ದೇ ಸಾಮಾನ್ಯ ಜೀವನ ನಡೆಸುವ ಬಯಕೆಯಿದೆ. ಆದರೇನು ನನ್ನದು ಎಕ್ಸ್ಟ್ರಾಆರ್ಡಿನರಿ ಜೀವನಶೈಲಿ — ಆದರೆ ನಾನೂ ಮದುವೆಯಾಗುತ್ತೇನೆ ಯಾಕೆಂದರೆ ನನಗದು ಬೇಕು — ಅದಲ್ಲದೇ ಇಡೀ ವಿಶ್ವಕ್ಕೆ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದೆ” ಎಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾಳೆ ಪ್ರಿಯಾಂಕಾ. ಆಕೆ ಮಕ್ಕಳೆಂದರೆ ತನಗೆ ಬಲು ಇಷ್ಟವೆಂದು ಈ ಮೊದಲೂ ಹೇಳಿಕೊಂಡಿದ್ದಳು.

LEAVE A REPLY