ಮೂಡಬಿದ್ರೆ ರೈತರ ಸಂತೆಯೋ ಹಣ ವಸೂಲಿ ಮಾರುಕಟ್ಟೆಯೋ

ಮೂಡಬಿದ್ರೆ ಎಂಸಿಎಸ್ ಬ್ಯಾಂಕ್ ನೂರನೇ ವರ್ಷದ ಸಮಯದಲ್ಲಿ ರೈತರ ಪರವಾಗಿ ಸ್ಥಳೀಯ ರೈತರಿಂದ ಬೆಳೆಸಲ್ಪಟ್ಟ ತರಕಾರಿ ಮಾರುಕಟ್ಟೆಗಾಗಿ ಸುಸಜ್ಜಿತ ಉಚಿತ ಮಾರುಕಟ್ಟೆಯನ್ನು ನಿರ್ಮಿಸಿತ್ತು. ಆರಂಭದಲ್ಲಿ ಬೇಡಿಕೆಗೆ ತಕ್ಕಂತೆ ನ್ಯಾಯಯುತ ಬೆಲೆಗೆ ದೊರಕುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಇಲ್ಲಿ ತಲೆ ಒಡೆಯುವಷ್ಟು ಬೆಲೆ ಏರಿಕೆಯಾಗಿದೆ. ರೈತನೇ ಮಾರುವ ಬದಲು ಒಂದಿಬ್ಬರು ಸಂಬಳ ನೀಡಿ ರೈತರಿಂದ ಮೂರುಕಾಸಿಗೆ ಪಡೆದು ಇಲ್ಲಿ ದುಪ್ಪಟ್ಟು ಬೆಲೆಗೆ ಮಾರುವ ವ್ಯವಸ್ಥೆ ಆಗುತ್ತಲಿದೆ. ಅಧ್ಯಕ್ಷ ಕೆ ಅಮರನಾಥ ಶೆಟ್ಟಿ ಹಾಗೂ ಅಲ್ಲಿನ ಮ್ಯಾನೇಜರ್ ಚಂದ್ರಶೇಖರ್ ಇಬ್ಬರಿಗೂ ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮಕೈಗೊಳ್ಳದೇ ಇರುವುದು ನಿಜಕ್ಕೂ ಖೇದಕರ. ಮಾರುವ ತರಕಾರಿಗೆ ರೈತರಿಗೆ ಸಿಗುವ ಬೆಲೆ ಸಿಗಲಿ ರೈತನಿಗೆ ನಿಜವಾದ ನ್ಯಾಯ ದೊರಕಲಿ ಬ್ಯಾಂಕಿನ ಆಡಳಿತ ಮಂಡಳಿಯವ ಉದ್ದೇಶ ಸಫಲತೆಯನ್ನು ಕಾಣಲಿ ಉತ್ತಮ ಮಟ್ಟದಲ್ಲಿ ಮಾರುಕಟ್ಟೆ ನಡೆಯಬೇಕು ಎಂಬ ಭಾವನೆಯಿಂದ ಆರಂಭವಾದ ಮಾರುಕಟ್ಟೆ ಮೂಡಬಿದ್ರೆ ಬಿಡಿ ಮಂಗಳೂರಿನಲ್ಲೂ ಇಲ್ಲದ ಬೆಲೆ ಇಲ್ಲಿ ನೀಡಬೇಕಿದೆ ಇದು ಗ್ರಾಹಕನಿಗೆ ತುಂಬಲಾರದ ಸಮಸ್ಯೆಯಾಗಿ ಪರಿಣಮಿಸಿದೆ ಇಲ್ಲಿ ಮಿಡ್ಲ್ ಮ್ಯಾನ್ ಬೇಡ ಬೇಡವೇ ಬೇಡ ಇಲ್ಲಿನ ಮಹಾನುಭಾವರು ಈ ವಿಚಾರದಲ್ಲಿ ಸರಿಯಾಗಿ ಗಮನಿಸಿ ರೈತನಿಗೆ ಲಾಭ ದೊರೆಯುವ ಹಾಗೆ ಮಾಡಬೇಕು. ಹತ್ತು ರೂಪಾಯಿ ಜಾಸ್ತಿ ಸೀದಾ ಸಾದಾ ರೈತನಿಗೆ ದೊರೆಯುವ ವ್ಯವಸ್ಥೆ ತಕ್ಷಣದಿಂದಲೇ ಆಗಬೇಕು ಪತ್ರಿಕೆಗಳಿಗೆ ಫೋಟೋ ಪೋಸ್ ನೀಡುವ ಸಭೆ ಸಮಾರಂಭಗಳಲ್ಲಿ  ರೇಡಿಯೋದಲ್ಲಿ ಭರಾಟೆ ಕೊಚ್ಚುವ ಮಹಾಶಯರು ಈ ಬಗ್ಗೆ ಚಿಂತಿಸಲಿ ರೈತರ ಪಾಲಿಗೆ ದಾರಿದೀಪವಾಗಲಿ

  • ವಾಸುದೇವರಾವ್  ಅಲಂಗಾರ್  ಮೂಡುಬಿದ್ರೆ