ದುರ್ವಾಸನೆ ಹೊಡೆಯುತ್ತಿರುವ ಮರವೂರು ಫಲ್ಗುಣಿ ನದಿ ತೀರ

ತ್ಯಾಜ್ಯ ನೀರಿನಿಂದ ಮೀನುಗಳ ಸಾವು

ಮಂಗಳೂರು : “ಮೀನುಗಳ ಮಾರಣ ಹೋಮಕ್ಕೆ ಕಾರಣವಾಗಿರುವ ಮರವೂರು ಫಲ್ಗುಣಿ ನದಿಯ ತೀರದಲ್ಲೀ ಈಗಲೂ ಮೀನುಗಳು ಸಾವನ್ನಪ್ಪುತ್ತಿವೆ. ನದಿಯ ಹಿನ್ನೀರು ಪೂರ್ತಿಬಣ್ಣ ಕಪ್ಪಾಗಿ ಬದಲಾಗಿ ಜಲಚರಗಳು ಸಾವನ್ನಪ್ಪಿದ ಬಗ್ಗೆ ಮಾದ್ಯಮಗಳು ವರದಿ ಮಾಡಿದ್ದರೂ ಇದುವರೆಗೂ ಯಾವುದೇ ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಂಡಿ ಅಣೆಕಟ್ಟಿನ ಮೇಲ್ಭಾಗದ ನೀರು ಹಸಿರಾದರೆ ಕೆಳಭಾಗದಲ್ಲಿ ಪೂರ್ತಿ ಕಪ್ಪಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಲಚರಗಳ ಸಾವಿನ ಸರಣಿಯೂ ಮುಂದುವರಿದಿದ್ದು ಸ್ಥಳೀಯರನ್ನು ಇನ್ನಷ್ಟು ಆತಂಕಕ್ಕೆ ಗುರಿಮಾಡಿದೆ.

ಈ ಭಾಗದಲ್ಲಿ ಸಾಯುತ್ತಿರುವ ಮೀನಿನ ದುರ್ವಾಸನೆ ಪರಿಸರ ಇಡೀ ವ್ಯಾಪಿಸಿದ್ದು, ಸ್ಥಳೀಯರು ಮೂಗು ಮುಚ್ಚಿ ಓಡಾಡುವಂತಾಗಿದೆ. ಕಾರ್ಖಾನೆಗಳಿಂದ ಬರುವ ತ್ಯಾಜ್ಯ ನೀರು ನದಿಗೆ ಸೇರಿಕೊಂಡು ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಫಲ್ಗುಣಿ ನದಿ ನೀರು ಕಲುಷಿತವಾಗಿದೆ.