ಮಾಪಿಳ್ಳ ಕಲಾ ಅಕಾಡೆಮಿಯ ಸಂಶೋಧನಾ ಕೇಂದ್ರಕ್ಕೆ ಬೀಗ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಹುನಿರೀಕ್ಷಿತ ಕುಂಬಳೆ ಮೊಗ್ರಾಲ್ ಮಾಪಿಳ್ಳ ಕಲಾ ಅಕಾಡೆಮಿಯ ಸಂಶೋಧನಾ ಕೇಂದ್ರಕ್ಕೆ ಬೀಗಬಿದ್ದಿದ್ದು, ಕೇಂದ್ರವನ್ನು ಕಲ್ಲಿಕೋಟೆಯ ನಾದಾಪುರಂಗೆ ಸ್ಥಳಾಂತರ ಗೊಳಿಸಿರುವುದು ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿದೆ.

ಮಾಯಿನ್ ಕುಟ್ಟಿ ವ್ಯೆದ್ಯರ್ ಸ್ಮಾರಕವು ಮಾಪಿಳ್ಳ ಅಕಾಡೆಮಿಯಾಗಿ ಕಾರ್ಯಾಚರಿಸುತ್ತಿದ್ದು, ಅಕಾಡೆಮಿಗೆ ಉಪ ಕೇಂದ್ರದ ಅಗತ್ಯವಿದೆ ಎಂಬ ಕಾರಣ ನೀಡಿ ಮೊಗ್ರಾಲಿನ ಸಂಶೋಧನಾ ಕೇಂದ್ರವನ್ನು ಮುಚ್ಚಿ ನಾದಾಪುರಕ್ಕೆ  ಸ್ಥಳಾಂತರಗೊಳಿಸುವ ಮೂಲಕ ಜಿಲ್ಲೆಯ ಕಲಾಪ್ರೇಮಿಗಳಿಗೆ ನಿರಾಶೆ ಮೂಡಿಸಿರುವುದಾಗಿ ಆರೋಪ ಕೇಳಿ ಬರುತ್ತಿದೆ.

ಆದರೆ ಏಕಾಏಕಿ  ಕೇಂದ್ರವನ್ನು ಸ್ಥಳಾಂತರ ಗೊಳಿಸಿದ್ದರಿಂದ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಮಾಪಿಳ್ಳ ಕಲೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗಿತ್ತು.

2009ರಲ್ಲಿ ಅಂದಿನ ಎಡರಂಗ ಸರಕಾರದ ಕಾಲಾವಧಿಯಲ್ಲಿ ಮಾಪಿಳ್ಳ ಕಲಾ ಸಂಶೋಧನಾ ಕೇಂದ್ರ  ಆರಂಭಗೊಂಡಿತ್ತು.

ಹಲವು ವರ್ಷಗಳ ಕಾಲ ಪ್ರಗತಿಪರ ಬೆಳವಣಿಗೆಯನ್ನು ಕಂಡಿದ್ದ ಕಲಿಕಾ ಮತ್ತು ಸಂಶೋಧನಾ ಕೇಂದ್ರಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಮಾಪಿಳ್ಳ ಕಲಾ ಅಕಾಡೆಮಿಯಿದ್ದು, ನಾದಾಪುರಂನಲ್ಲಿ ಉಪಕೇಂದ್ರವನ್ನು ಅನುಮತಿ ನೀಡಿದ ಸರಕಾರ, ಸಂಶೋಧನಾ ಕೇಂದ್ರವನ್ನು ಅಲ್ಲಿಗೆ ಸ್ಥಳಾಂತರಿಸುವ ಮೂಲಕ ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲೆಯಲ್ಲಿ ಪಕ್ಷಿಪಾಟು, ಮಾಪಿಳ್ಳಪಾಟ್ ಸಹಿತ ದಫ್ ಕಲೆಗಳಿದ್ದು, ಜಿಲ್ಲೆಯಲ್ಲಿ ಹಲವು ಕವಿಗಳು, ಮಾಪಿಳ್ಳಪಾಟ್ ಹಾಡುಗಾರರಿದ್ದಾರೆ. ಹಲವು ವೈವಿಧ್ಯತೆಗಳಿಗೆ ಹೆಸರಾಗಿರುವ ಜಿಲ್ಲೆಯನ್ನು ಅವಗಣಿಸಲಾಗಿದೆ ಎಂದು ಮೊಗ್ರಾಲ್ ಗ್ರಾಮಸ್ಥರು ಹಾಗೂ ಜಿಲ್ಲೆಯ ಕಲಾವಿದರು ಆರೋಪಿಸಿದ್ದಾರೆ.

 

 

LEAVE A REPLY