ಮದುವಣಗಿತ್ತಿ ಗೆಟಪ್ಪಿನಲ್ಲಿ ಮಾನ್ವಿತಾ

ಈ ನಡುವೆ ಸ್ಯಾಂಡಲ್ವುಡ್ಡಿನಲ್ಲಿ ಕೆಲವಾರು ನಟಿಯರು ಮದುವೆಯಾಗಿದ್ದಾರೆ. ಅದೇ ಸಾಲಿಗೆ ಮೊನ್ನೆ ಮೊನ್ನೆ ಚಿತ್ರರಂಗಕ್ಕೆ ಕಾಲಿಟ್ಟ ಮಾನ್ವಿತಾ ಹರೀಶ್ ಕೂಡಾ ಸೇರಿಬಿಟ್ಟಳಾ ಅಂತ ಅವಳ ಈ ಮದುವೆ ಗೆಟಪ್ ನೋಡಿ ಕೆಲವರಿಗೆ ಅನಿಸದೇ ಇರದು. ಆದರೆ ಮಾನ್ವಿತಾಳ ಈ ಗೆಟಪ್ ರಿಯಲ್ ಲೈಫ್ ಮದುವೆಗಾಗಿ ಅಲ್ಲ, ಬದಲಾಗಿ ರೀಲಿಗಾಗಿ.

ಮಾನ್ವಿತಾ ಈಗ ರಾಜಶೇಖರ್ ಬಂಡಿಯಪ್ಪ ನಿರ್ದೇಶನದ `ತಾರಕಾಸುರ’ ಚಿತ್ರದ ಶೂಟಿಂಗಿನಲ್ಲಿ ನಿರತಳಾಗಿದ್ದಾಳೆ. ಈ ಚಿತ್ರದಲ್ಲಿ ಮದುವೆ ಸನ್ನಿವೇಶದ ಚಿತ್ರೀಕರಣ ಮೊನ್ನೆ ಬೆಂಗಳೂರಿನ ಛತ್ರವೊಂದರಲ್ಲಿ ನಡೆದಿದೆ. ಕೇಸರಿ ಬಣ್ಣದ ರೇಶ್ಮೆ ಸೀರೆ ಉಟ್ಟು, ಮುಡಿತುಂಬಾ ಮಲ್ಲಿಗೆ ಹೂ ಮುಡಿದು, ಮೈತುಂಬಾ ಆಭರಣ ಧರಿಸಿ ಮಾನ್ವಿತಾ ಮದುವೆ ಹೆಣ್ಣಾಗಿ ಮಿರಮಿರನೆ ಮಿಂಚುತ್ತಿದ್ದಳು.

ಅಂದ ಹಾಗೆ ಮಾನ್ವಿತಾಳ ಕೈಯಲ್ಲಿ ಕೆಲವಾರು ಚಿತ್ರಗಳಿದ್ದು ಸದ್ಯ ಆಕೆಗೆ ಮದುವೆ ಬಗ್ಗೆ ಯೋಚನೆ ಮಾಡಲೂ ಪುರುಸೊತ್ತಿಲ್ಲವಂತೆ.