ಇನ್ನೊಂದು ಚಿತ್ರದಲ್ಲಿ ಮಾನ್ವಿತಾ

`ಕೆಂಡಸಂಪಿಗೆ’ ಚಿತ್ರದ ಮೂಲಕ ಗಾಂಧೀನಗರಕ್ಕೆ ಕಾಲಿಟ್ಟ ಕುಡ್ಲದ ಕುವರಿ ಮಾನ್ವಿತಾ ಹರೀಶ್ ಈಗ ಚಿತ್ರರಂಗದಲ್ಲಿ ಓಲ್ಳೊಳ್ಳೆಯ ಆಫರ್ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಆಕೆ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಆ ಸಿನಿಮಾ ಕಂಪ್ಲೀಟ್ ಆಗುವ ಮೊದಲೇ ಮಾನ್ವಿತಾ ಇನ್ನೊಂದು ಚಿತ್ರಕ್ಕೆ ಸದ್ದಿಲ್ಲದೇ ಸಹಿ ಹಾಕಿದ್ದಾಳೆ.

`ಅಕಿರ’ ಖ್ಯಾತಿಯ ನವೀನ್ ರೆಡ್ಡಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಮಾನ್ವಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಚಿತ್ರದಲ್ಲಿ ಮಾನ್ವಿತಾಗೆ ಜೋಡಿಯಾಗಿ ಪ್ರಭು ಅಭಿನಯಿಸಲಿದ್ದಾನೆ. ಈ ಹೊಸ ನಟ ಪ್ರಭು ಈಗ `ಉರ್ವಿ’ ಚಿತ್ರದಲ್ಲಿ ನಟಿಸುತ್ತಿದ್ದಾನೆ.

ರೆಡ್ಡಿ ನಿರ್ದೇಶನದ ಈ ಸಿನಿಮಾ ಕಾಮಿಡಿ ಥ್ರಿಲ್ಲರ್ ಆಗಿದ್ದು, ಜತೆಗೆ ಸಾಕಷ್ಟು ಸಸ್ಪೆನ್ಸ್ ಕೂಡಾ ಸಿನಿಮಾದಲ್ಲಿದೆಯಂತೆ.

ಮಾರ್ಚ್ ಕೊನೇ ವಾರದಲ್ಲಿ ಶೂಟಿಂಗ್ ಶುರುವಾಗುವ ನಿರೀಕ್ಷೆ ಇದೆ.