ಪೊಲೀಸರಿಗೆ ದೂರು ನೀಡಿದ್ದನ್ನು ಪ್ರಶ್ನಿಸಿ ಹಲ್ಲೆ : ಐದು ಮಂದಿ ವಿರುದ್ಧ ಕೇಸು

ಆಸ್ಪತ್ರೆಯಲ್ಲಿ ವೇಣುಗೋಪಾಲ್ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪತ್ನಿ, ಪುತ್ರಿಯ ಜತೆಯಾಗಿ ಬೈಕಿನಲ್ಲಿ ಸಂಚರಿಸುತ್ತಿದ್ದ ಮಧ್ಯೆ ತಡೆದು ನಿಲ್ಲಿಸಿ ಹಲ್ಲೆಗೈದಿರುವುದನ್ನು ಪೊಲೀಸರಿಗೆ ದೂರು ನೀಡಿದ ಕೋಪದಲ್ಲಿ ಸಿಪಿಎಂ ಕಾರ್ಯಕರ್ತಗೆ ಮತ್ತೆ ಹಲ್ಲೆಗೈದು ಗಾಯಗೊಳಿಸಲಾಗಿದೆ.

ಸಿಪಿಎಂ ಬಾಡೂರ್ ಲೋಕಲ್ ಕಮಿಟಿ ಸದಸ್ಯ ವೇಣುಗೋಪಾಲ್ ಶೆಟ್ಟಿ (42) ಎಂಬವರನ್ನು ಹಲ್ಲೆಗೈಯಲಾಗಿದೆ.

ಹಾಲು ಮಾರಾಟ ಮಾಡಿ ಮರಳಿ ಮನೆಯ ಕಡೆ ಬರುತ್ತಿರುವ ದಾರಿ ಮಧ್ಯೆ ಕಾರಲ್ಲಿ ಬಂದ ಐದು ಮಂದಿಯ ತಂಡ ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಸಯ್ಯದ್, ಮೊಹಮ್ಮದ್ ರಫೀಕ್, ಆಶಿಕ್ ಬಾತಿಷಾ, ಅಶ್ರಫ್, ನಾಸಿರ್ ಎಂಬವರ ವಿರುದ್ಧ ಮಂಜೇಶ್ವರ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ಮಂಗಳವಾರ ವೇಣುಗೋಪಾಲ್ ಶಾಲೆಯಲ್ಲಿ ಕಲೋತ್ಸವ ನಡೆಯುತಿದ್ದ ಮಧ್ಯೆ ಅಡುಗೆ ಕೋಣೆಗೆ ನುಗ್ಗಲು ಯತ್ನಿಸಿದ ಯುವಕನನ್ನು ತಡೆದಿದ್ದರು. ಇದರ ಮುಂದುವರಿದ ಭಾಗವಾಗಿ ಬೈಕನ್ನು ತಡೆದು ವೇಣುಗೋಪಾಲ ಶೆಟ್ಟಿಗೆ ಹಲ್ಲೆಗೈದು ಪತ್ನಿ ಹಾಗೂ ಪುತ್ರಿಯನ್ನು ದೂಡಿ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಮೂರು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದರು.