ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಮಂಜೇಶ್ವರ ಪಂಚಾಯತ್ ಸಜ್ಜು

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಅಧಿಕೃತರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂ ವ್ಯಾಪ್ತಿಯಲ್ಲಿರುವ ಮಂಗಲ್ಪಾಡಿ, ಮಂಜೇಶ್ವರ ಗ್ರಾ ಪಂ.ಗಳಲ್ಲಿ ಅಧಿಕಗೊಳ್ಳುತ್ತಿರುವ ಮಾರಕವಾದ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಹಾಗೂ ನಿರ್ಮೂಲನಗೊಳಿಸಲು ಮಂಜೇಶ್ವರ ಪಂ 2016-17ನೇ ವರ್ಷದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ಶಿಬಿರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಪಾಲ್ಗೊಳ್ಳುವಂತೆ ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ನಡೆಸುವಂತೆ ಪಂ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಂತೆ ಹಲವೆಡೆ ಈಗಾಗಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಉಳಿದ ಪ್ರದೇಶಗಳನ್ನು ಆದಷ್ಟು ಬೇಗನೆ ಮುಗಿಸಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದಾಗಿ ಅವರು ಹೇಳಿದರು.
ಶಿಬಿರದ ಪ್ರಚರಣಾರ್ಥ ಜನವರಿ 20 ಹಾಗೂ 21ನೇ ತಾರೀಕಿನಂದು ಜಾಥಾ ನಡೆಯಲಿದೆ. ಅದೇ ರೀತಿ ಜನವರಿ 23ರಂದು ಮಂಗಲ್ಪಾಡಿ ಸಿ ಎಚ್ ಸಿ ಕೇಂದ್ರದಲ್ಲಿ ಮತ್ತು ಜನವರಿ 24ರಂದು ಮಂಜೇಶ್ವರ ಸಿ ಎಚ್ ಸಿ ಕೇಂದ್ರದಲ್ಲಿ ಕ್ಯಾನ್ಸರ್ ರೋಗಗಳ ಬಗ್ಗೆ ಮಾಹಿತಿ ಶಿಬಿರ ನಡೆಯಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.