ಮತ್ತೆ ಬೀದಿ ಬದಿ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಿದ ಮಂಜೇಶ್ವರ ಪಂಚಾಯತ್

ಉದ್ಯಾವರ ಮಾಡದಿಂದ ತೆರವುಗೊಂಡ ಗೂಡಂಗಡಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಹಲವು ಸಲ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಸ್ಥಳೀಯಾಡಳಿತಕ್ಕೆ ಸವಾಲಾಗಿ ನಿಂತಿದ್ದ ರಸ್ತೆ ಬದಿ ಗೂಡಂಗಡಿಗಳನ್ನು ಮತ್ತೆ ಶುಕ್ರವಾರ ರಾತ್ರಿ ತೆರವುಗೊಳಿಸಲಾಯಿತು.

ಕುಂಜತ್ತೂರು ಜಂಕ್ಷನ್ ಇಕ್ಕಟ್ಟಿನಲ್ಲಿ ನಾಗರಿಕರು ನಡೆದಾಡುವ ಸ್ಥಳದಲ್ಲೇ ಇರುವ ಗೂಡಂಗಡಿಗಳನ್ನು ಹಿಂದೊಮ್ಮೆ ತೆರವುಗೊಳಿಸಿದ್ದರೂ ಅಲ್ಲಿ ಮತ್ತೆ ಅನಧಿಕೃತವಾಗಿ ತಲೆ ಎತ್ತಿದ ಗೂಡಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು. ಅದೇ ರೀತಿ ಉದ್ಯಾವರ ಮಾಡ ರಫಾ ಹಾಲ್ ಸಮೀಪದ ಗೂಡಂಗಡಿಗಳನ್ನು ತೆÉರವುಗೊಳಿಸಲಾಯಿತು. ಇದೇ ರೀತಿ ಹಲವೆಡೆ ಕಾರ್ಯಾಚರಣೆ ನಡೆದಿದೆ. ಆದರೆ ತೆರವುಗೊಳಿಸದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಬದಿಯ ಅದೇ ಸ್ಥಳದಲ್ಲಿ ಹಣ್ಣುಹಂಪಲು ಗಾಡಿ ಪ್ರತ್ಯಕ್ಷವಾಗಿರುವುದು ಸ್ಥಳೀಯಾಡಳಿತಕ್ಕೆ ಸವಾಲೆಂಬಂತೆ ಕಂಡುಬಂತು.

ಸರಕಾರದ ಸುತ್ತೋಲೆಯಂತೆ ರಾಷ್ಟ್ರೀಯ ಹೆದ್ದಾರಿ, ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕೃತರು ಹಾಗೂ ಪೆÇಲೀಸರ ಸಹಾಯದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನಾಗರಿಕರ ದೂರು ವ್ಯಾಪಕವಾಗುತ್ತಿದೆ. ಈ ಮಧ್ಯೆ ಆಡಳಿತ ಪಕ್ಷಗಳ ಕೆಲ ವ್ಯಕ್ತಿಗಳು ಅನಧಿಕೃತ ಗೂಡಂಗಡಿಯವರಿಗೆ ತೆರೆಮರೆಯಲ್ಲಿ ಬೆಂಬಲ ನೀಡುತ್ತಿರುವುದಾಗಿ ಕೂಡಾ ಆರೋಪ ಕೇಳಿಬಂದಿದೆ.

ವ್ಯಾಪಾರಿ ಸಂಘಟನೆಗಳು ಹಾಗೂ ನಾಗರಿಕರ ವಲಯದಿಂದ ಅನಧಿಕೃತ ಗೂಡಂಗಡಿ ತೆರವಿಗೆ ಬೆಂಬಲಗಳು ವ್ಯಾಪಕವಾಗುತ್ತಿವೆ. ಪಂ ಸಭೆಯಲ್ಲಿ ಎಲ್ಲಾ ಸದಸ್ಯರು ಗೂಡಂಗಡಿ ತೆರವಿಗೆ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಇನ್ನೂ ಹಲವೆಡೆ ಅನಧಿಕೃತ ಗೂಡಂಗಡಿಗಳು ಬಾಕಿ ಉಳಿದಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.