ಮಣಿಪಾಲ ಪರ್ಕಳ ರಸ್ತೆ ಗಬ್ಬೆದ್ದು ನಾರುತ್ತಿದೆ

ಮಣಿಪಾಲದಿಂದ ಪರ್ಕಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಸ್ಥಿತಿ ಅಧೋಗತಿಗೆ ತಲುಪಿದ್ದರೂ ಕೇಳುವವರೇ ಇಲ್ಲ ರಸ್ತೆ ಕೆಡಲು ಬಾಕಿ ಇಲ್ಲದಷ್ಟು ಕೆಟ್ಟು ಹೋಗಿದ್ದರೂ ಉಡುಪಿ ಸಂಸದೆಯಾಗಲಿ ಉಸ್ತುವಾರಿ ಸಚಿವರಾಗಲಿ ಗಮನಿಸಿದಂತಿಲ್ಲ ಇವರು ಭರವಸೆಯಲ್ಲಿಯೇ ಗೋಪುರ ಕಟ್ಟುತ್ತಿರುತ್ತಾರೆಯೇ ವಿನಃ ಕಾರ್ಯರೂಪಕ್ಕೆ ಯಾವುದೂ ಬರುತ್ತಿಲ್ಲ ಉಡುಪಿ ಸಂಸದೆ ಇತರ ಪಕ್ಷದವರ ಮೇಲೆ ಗೂಬೆ ಕೂರಿಸಲು ಮಾತ್ರ ಇದ್ದಾರೆಯೇ ತಿಳಿಯುತ್ತಿಲ್ಲ ರಸ್ತೆ ಇಷ್ಟು ಕೆಟ್ಟು ಹೋಗಿದ್ದರೂ ಉಡುಪಿ ಸಂಸದೆಗೆ ಕ್ಯಾರೇ ಇಲ್ಲ ಸಂಬಂಧಪಟ್ಟವರು ಗಮನಿಸಿ ಹೆದ್ದಾರಿ ರಸ್ತೆ ಸರಿಪಡಿಸಲಿ

  • ಅನ್ಸಾರ್  ಮಣಿಪಾಲ