ಮೇ 19ರಿಂದ ಕದ್ರಿ ಪಾರ್ಕಿನಲ್ಲಿ ಮಾವು, ಹಲಸಿನ ಹಣ್ಣು ಉತ್ಸವ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕದ್ರಿ ಪಾರ್ಕಿನಲ್ಲಿ ಒಂದು ವಾರಗಳ ಮಾವು ಮತ್ತು ಹಲಸಿನ ಹಣ್ಣುಗಳ ಉತ್ಸವ ಮೇ 19ರಿಂದ ನಡೆಯಲಿದೆ.

ತೋಟಗಾರಿಕಾ ಇಲಾಖೆ ಮತ್ತು ರಾಜ್ಯ ಮಾವು ಅಭಿವೃದ್ಧಿ ನಿಗಮ ಈ ಉತ್ಸವವನ್ನು ಸಂಘಟಿಸಿದ್ದು, ಉತ್ಸವದಲ್ಲಿ ರಾಜ್ಯದ ವಿವಿಧ ತಳಿಗಳ ಮಾವು ಮತ್ತು ಹಲಸಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಮೇಳದಲ್ಲಿ ನೈಸರ್ಗಿಕವಾಗಿ ಹಣ್ಣಾದ ಮಾವುಗಳನ್ನು ಮಾರಾಟ ಮಾಡಲಾಗುವುದು ಎಂದು ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಳದಲ್ಲಿ ಮಾವು ಮತ್ತು ಹಲಸು ಬೆಳೆಗಾರರು ತಮ್ಮ ಮಾವು ಹಾಗೂ ಹಲಸಿನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಬಹುದಾಗಿದೆ. ಉದ್ಯಮಿಗಳು ಮೌಲ್ಯಾಧಾರಿತ ಮತ್ತು ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟ ಮಾಡಬಹುದು ಎಂದು ತೋಟಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.