ಮಂಡಿ ಮರುಜೋಡಣಾ ಶಸ್ತ್ರಕ್ರಿಯೆಯ ಬಗ್ಗೆ ಮಂಗಳೂರು -ಅಮೆರಿಕಾ ವೈದ್ಯರ ಸಂವಹನ

ಮಂಗಳೂರು : ಕಣಚೂರು ಹಾಸ್ಪಿಟಲ್ ಎಂಡ್ ರಿಸರ್ಚ್ ಸೆಂಟರಿನಲ್ಲಿ /ಸೋಮವಾರ ನಡೆದ ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆಯ (ನೀ ರಿಪ್ಲೇಸ್ಮೆಂಟ್ ಸರ್ಜರಿ) ನೇರ ಪ್ರಸಾರವನ್ನು 20 ಹಿರಿಯ ವೈದ್ಯರುಗಳು ವೀಕ್ಷಿಸಿದ್ದಾರೆ. ನಾಟೆಕಲ್ಲಿನಲ್ಲಿರುವ ಕಣಚೂರ್ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಹಾಗೂ ಪ್ರಿಸಿಶನ್ ಆರ್ಥೋಪೀಡಿಕ್ಸ್, ಟೆಕ್ಸಾಸ್, ಅಮೆರಿಕಾ ಸಹಯೋಗದೊಂದಿಗೆ ಈ ಶಸ್ತ್ರಕ್ರಿಯೆ ನಡೆಸಲಾಗಿದೆ. ಕಣಚೂರು ಸಂಸ್ಥೆಯ ಆರ್ಥೋಪೀಡಿಕ್ಸ್ ವಿಭಾಗದ ಮುಖ್ಯಸ್ಥ ಡಾ ಜಲಾಲುದ್ದೀನ್ ಎಂ ವಿ ಹಾಗೂ ಪ್ರಿಸಿಶನ್ ಆರ್ಥೋಪೀಡಿಕ್ಸ್ ಸಂಸ್ಥೆಯ ಮುಖ್ಯ ಮೂಳೆ ಮರುಜೋಡಣಾ ಸರ್ಜನ್ ಡಾ ಜೋಸ್ ಮರಿಯೋ ಮರೀನಾ ಈ ಶಸ್ತ್ರಕ್ರಿಯೆಯನ್ನು ನಡೆಸಿದರು.

“ಸಂಪೂರ್ಣ ಮಂಡಿ ಮರುಜೋಡಣಾ ಶಸ್ತ್ರಕ್ರಿಯೆಯಲ್ಲಿ ವಿಶೇಷವೇನಿಲ್ಲವಾದರೂ ಈ ಪ್ರಕ್ರಿಯೆಯ ಮುಖಾಂತರ ವೈದ್ಯರು ಶಸ್ತ್ರಕ್ರಿಯೆಗೆ ಸಂಬಂಧಿಸಿದಂತೆ ಹಲವಾರು ವಿಚಾರಗಳ ಬಗ್ಗೆ ವೈದ್ಯರು ತಮ್ಮ ಅಭಿಪ್ರಾಯ ಮಂಡಿಸಿದರಲ್ಲದೆ ಈ ಬಗ್ಗೆ ಡಾ ಮರೀನಾ ಅವರೊಡನೆಯೂ ಚರ್ಚೆ ನಡೆಸಿದರು. ಎರಡೂ ದೇಶಗಳಲ್ಲಿ ನಡೆಯುವ ಇಂತಹ ಶಸ್ತ್ರಕ್ರಿಯೆಗಳಲ್ಲಿ ಇನ್ನಷ್ಟು  ಸುಧಾರಣೆ ಇದು ತರಲು ಸಹಕಾರಿಯಾಗುವುದು” ಎಂದು ಡಾ ಜಲಾಲುದ್ದೀನ್ ಹೇಳಿದ್ದಾರೆ.