ನಗರದ ಆನ್ಲೈನ್ ಅರ್ಜಿದಾರನ ಅಹವಾಲಿಗೆ ಸೈಕ್ಲಿಸ್ಟ್ ಬೆಂಬಲ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದು ವೇಳೆ ಸೈಕ್ಲಿಂಗ್ ಆಸಕ್ತರು ಭವಿಷ್ಯದಲ್ಲಿ ಎಲ್ಲಾ ಪ್ರಮುಖ ರಸ್ತೆಗಳನ್ನು ಬಳಸುವ ಅವಕಾಶ ಸಿಕ್ಕಂತಾದರೆ ಅದರ ಗೌರವ ವಂದನೆ ಮಂಗಳೂರಿನ ಫಳ್ನೀರ್ ನಿವಾಸಿ ಸೈಕ್ಲಿಂಗ್ ಆಸಕ್ತ ರಹೀಮ್ ಟೀಕಾಯರಿಗೆ ಸಲ್ಲಬೇಕು. ಹೌದು, ಈ 64 ವರ್ಷದ ಸೈಕ್ಲಿಸ್ಟ್, ಸಂಸದೀಯ ಸ್ಥಾಯಿ ಸಮಿತಿಯು ಸೈಕ್ಲಿಸ್ಟ್ ಮತ್ತು ಪಾದಚಾರಿಗಳಿಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇದ ಹೇರಿ ಹೊರಡಿಸಿರುವ ಶಿಫಾರಸ್ಸಿಗೆ ಬದಲಾವಣೆ ತರಬೇಕು ಎಂಬ ಬೇಡಿಕೆ ಮುಂದಿಟ್ಟು ಆನ್ಲೈನ್ ಅಭಿಯಾನವನ್ನೇ ಆರಂಭಿಸಿದ್ದಾರೆ. ಕೆಲವೇ ದಿನಗಳಲ್ಲಿ ಆನ್ಲೈನ್ ಅಹವಾಲಿಗೆ 7,500 ರುಜುಗಳು ಬಿದ್ದಿವೆ. 13 ತಿಂಗಳ ಹಿಂದೆಯಷ್ಟೆ ಸೈಕ್ಲಿಂಗ್ ಪ್ರಾರಂಭಿಸಿರುವ ರಹೀಮ್ ಇದುವರೆಗೆ 4,500 ಕಿ ಮೀ ಸೈಕ್ಲಿಂಗ್ ಮಾಡಿದ್ದಾರೆ. ಮಾರ್ಚ್ ಎರಡನೇ ವಾರದಲ್ಲಿ ಅಹವಾಲು ಬಿಡುಗಡೆಗೊಳಿಸಿದ್ದು, 500ಕ್ಕೂ ಅಧಿಕ ಸವಾರರು ಸಹಿ ಮಾಡಿದ್ದಾರೆ. ಕೊನೆಯ ದಿನಗಳಲ್ಲಿ ಒಂದು ವಾರದಲ್ಲಿ 2000ಕ್ಕೂ ಅಧಿಕ ಸಹಿಗಳು ಬಂದಿವೆ ಎಂದು ರಹೀಮ್ ಹೇಳಿದ್ದಾರೆ,

ಸೈಕ್ಲಿಸ್ಟುಗಳಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸೈಕ್ಲಿಂಗಿಗೆ ನಿಷೇಧಿಸಲಾಗುವುದು ಎಂಬ ವರದಿಗಳು ಹೊರಬಂದ ಮರುದಿನ ನಾನು ನನ್ನ ಸೈಕಲಿನಲ್ಲಿ ಪಣಂಬೂರು ಕಡೆಗೆ ಉರ್ವ ಮಾರ್ಕೆಟ್ ಬಳಿ ಚಲಿಸುತ್ತಿರುವಾಗ ಭಾರೀ ಶ್ರೀಮಂತ ಕಾರೊಂದನ್ನು ಹಿಂದಕ್ಕೆ ಹಾಕಿದ ಚಾಲಕ ಕಾರಿನ ಕಿಟಕಿ ಗ್ಲಾಸಿನಿಂದ ತಲೆ ಹೊರಕ್ಕೆ ಹಾಕಿ ತುಳುವಿನಲ್ಲಿ “ಕೆಲವೇ ದಿನಗಳಲ್ಲಿ ನಿಮ್ಮನ್ನು ಹೈವೇಗಳಿಂದ ಹೊರಕ್ಕೆ ಎಸೆಯಲಾಗುವುದು” ಎಂದು ಹೇಳಿದ್ದ. ನಾನು ಒಂದು ಮಾತನಾಡದೆ ಸೈಕಲ್ ತುಳಿದಿದ್ದೆ ಎಂದು ರಹೀಮ್ ಹೇಳಿದ್ದಾರೆ.