ಸಂಜೆ ನಂತರ ಮಾಯವಾಗುತ್ತಿರುವ ಮಂಗಳೂರು ಪುತ್ತೂರು ಸರಕಾರಿ ಬಸ್

ಪುತ್ತೂರು ಮಂಗಳೂರು ಹಾಗೂ ಮಂಗಳೂರು ಪುತ್ತೂರು ದಿನನಿತ್ಯವೂ ಸರಕಾರಿ ಬಸ್ಸುಗಳು ಬೆಳಿಗ್ಗೆಯಿಂದ ಸಂಜೆ ಸುಮಾರು 6-30 ಗಂಟೆತನಕ ಪ್ರತೀ 10 ನಿಮಿಷಕ್ಕೆ ಒಂದರಂತೆ ಓಡುತ್ತಿದ್ದು ಹೆಚ್ಚಿನ ಬಸ್ಸುಗಳು ತುಂಬಿ ತುಳುಕುತ್ತಿದ್ದು, ಉತ್ತಮ ಆದಾಯವೂ ಇದೆ. ಇನ್ನೊಂದು ಕಡೆಯಿಂದ ಖಾಸಗಿ ಬಸ್ಸುಗಳು ತೀವ್ರ ಸ್ಪರ್ಧೆ ಕೊಡುತ್ತಿದ್ದು, ಖಾಸಗಿ ಬಸ್ಸುಗಳಲ್ಲಿಯೂ ಸೀಟುಗಳು ಭರ್ತಿಯಾಗಿರುವಂತಿದೆ. ಉತ್ತಮ ಆದಾಯವೂ ಇದೆ. ಆದರೆ ಸಂಜೆ 6.30 ಗಂಟೆ ನಂತರ ಮಂಗಳೂರಿನಿಂದ ಪುತ್ತೂರಿಗೆ ಹೋಗಲು ಸರ್ಕಾರಿ ಬಸ್ಸುಗಳೇ ಮಾಯವಾಗುತ್ತಿದೆ. ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವ ಅಂದರೆ ಆ ಬಸ್ ಫುಲ್ ಆಗಿರುತ್ತದೆ. ಅಂದರೆ ಸಂಜೆ 6.30 ಗಂಟೆ ನಂತರ ಸರಕಾರಿ ಬಸ್ಸುಗಳ ಕೊರತೆ ಇದೆ. ಮಂಗಳೂರಿನಿಂದ ಧರ್ಮಸ್ಥಳಕ್ಕೂ ಹಾಗೂ ಕಾಸರಗೋಡಿಗೆ ನಿಮಿಷಕ್ಕೆ ಒಂದರಂತೆ ಸರಕಾರಿ ಬಸ್ಸುಗಳು ಓಡುತ್ತಿದೆ. ಪುತ್ತೂರಿಗೆ ಹೋಗಲು ಬಸ್ಸುಗಳೇ ಇರದಿರಲು ಕಾರಣಗಳೇನು ಜ್ಯೋತಿ ಬಸ್ ನಿಲ್ದಾಣದಿಂದ ಪುತ್ತೂರಿಗೆ ಹೋಗಲು ಇರುವ ಪ್ರಯಾಣಿಕರು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಾದು ಕಾದು ಕೊನೆಗೆ ಬಸ್ ನಿಲ್ದಾಣದಲ್ಲಿಯೇ ಬಾಕಿಯಾಗುವ ಪರಿಸ್ಥಿತಿ. ಇದಕ್ಕೆ ಸಂಬಂಧಪಟ್ಟ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸಂಜೆ ನಂತರ ಸರಿಯಾದ ಸಮಯಕ್ಕೆ ಬಸ್ ಓಡಿಸಿ ಪ್ರಯಾಣಿಕರು ಬೇಗನೇ ಮನೆಗೆ ತಲುಪುವ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳುವರೇ

  • ಅರ್ಥರ್ ಮೆಂಡೋನ್ಸಾ  ಪುತ್ತೂರು