ಮಂಗಳೂರಿನ ಮಂಗಳ ಬ್ಯಾಡ್ಮಿಂಟನ್ ಕ್ಲಬ್ ಪ್ರಶಸ್ತಿ ಗೆದ್ದುಕೊಂಡಿದೆ

ಹಳೆಯಂಗಡಿ ತೋಕೂರು ಲೈಟ್‍ಹೌಸ್ ಟೋರ್ಪಡೋಸ್ ಕ್ಲಬ್ ವತಿಯಿಂದ ನಡೆದ ಅಂತರಜಿಲ್ಲಾ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಮಂಗಳೂರಿನ ಮಂಗಳ ಬ್ಯಾಡ್ಮಿಂಟನ್ ಕ್ಲಬ್ ಪ್ರಶಸ್ತಿ ಗೆದ್ದುಕೊಂಡಿದೆ. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಈ ಸಂದರ್ಭ ಕ್ಲಬ್ಬಿನ ಉಪಾಧ್ಯಕ್ಷ ದೇವೇಂದ್ರ ಶೆಟ್ಟಿ, ಉದ್ಯಮಿ ಯೋಗೇಂದ್ರ ಸುವರ್ಣ, ಮಂಗಳೂರು ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಾಜಿ ಕಾರ್ಯದರ್ಶಿ ಹರೀಶ್ ಗಟ್ಟಿ, ಟೋರ್ಪಡೋಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ, ಕೋಚ್ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.