ಡಿ 24ರಿಂದ ಮಂಗಳೂರು – ಹೈದರಾಬಾದ್ ನಿತ್ಯ ವಿಮಾನ

ಮಂಗಳೂರು : ಮಂಗಳೂರು ಮತ್ತು ಹೈದರಾಬಾದ್ ನಡುವೆ ನಿತ್ಯ ಸಂಚರಿಸುತ್ತಿದ್ದ ವಿಮಾನ ಯಾನವು ಮೂರು ವರ್ಷಗಳ ಹಿಂದೆ ರದ್ದಾದ ಬಳಿಕ ಡಿ 24ರಿಂದ ಇದೇ ನಗರಗಳ ನಡುವೆ ಸ್ಪೈಸ್ ಜೆಟ್ ವಿಮಾನ ಹಾರಾಟಕ್ಕೆ ಮುಂದಾಗಿಜe.

ಸ್ಪೆಶಲ್ ಜೆಟ್ ಫ್ಲೈಟ್ ಎಸ್ ಜಿ 1071 ಹೈದ್ರಾಬಾದ್‍ನಿಂದ ಮಧ್ಹಾನ್ನ 1 ಗಂಟೆಗೆ ಹೊರಟು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.30ಕ್ಕೆ ತಲುಪಲಿದೆ. ಅದೇ  ವಿಮಾನ ಮಂಗಳೂರಿನಿಂದ 2.50ಕ್ಕೆ ಟೇಕಾಫ್ ಆಗಿ ಹೈದರಾಬಾದಿಗೆ ಸಂಜೆ 4.20ಕ್ಕೆ ತಲುಪಲಿದೆ. 80 ಮಂದಿ ಪ್ರಯಾಣಿಕರು ಇದರಲ್ಲಿ ಸಂಚರಿಸಲು ಕಾಯ್ದಿರಿಸಬಹುದಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜಿ ಟಿ ರಾಧಾಕೃಷ್ಣ ಅವರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೇ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತನ್ನ ಹಾರಾಟ ಸ್ಥಗಿತಗೊಳಿಸಿತ್ತು. ಇದೀಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 16 ದೇಶೀಯ ವಿಮಾನಗಳು ನಿತ್ಯ ಹಾರಾಡುತ್ತಿವೆ ಎಂದು ರಾಧಾಕೃಷ್ಣ ಹೇಳಿದ್ದಾರೆ. “ವಿದೇಶದ ಕಪ್ಪು ಹಣ ತರಲು ನೋಟ್ ರದ್ದತಿ ಆಗಿಲ್ಲ, ದೇಶ ಹಲವು ಸಮಸ್ಯೆಯಿಂದ ನಲುಗುತ್ತಿದೆ, ಮೋದಿ ಮತ್ತು ಬಿಜೆಪಿಯ ವಿರುದ್ಧ ಜನ ಬೇಸತ್ತಿದ್ದಾರೆ” ಎಂದು ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ ಹೇಳಿದರು.

ಲಲಿತ್ ಮೋದಿ, ವಿಜಯ ಮಲ್ಯ ಮತ್ತಿತರರನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿಯವರೇ ವಿದೇಶಕ್ಕೆ ಕಳಿಸಿ ಈಗ ಕಪ್ಪು ಹಣದ ಬಗ್ಗೆ ಮಾತನಾಡುತ್ತಾರೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಂಚಾಯಿತಿ ಅಧ್ಯಕ್ಷರಾದ ಚಾರದ ಸಂದೀಪ್, ಮುದ್ರಾಡಿಯ ಶಶಿಕಲಾ ಪೂಜಾರಿ,  ಪ್ರಮುಖರಾದ ರಾಘವ ದೇವಾಡಿಗ, ಜಯಕರ ಪೂಜಾರಿ, ಭೋಜ ಪೂಜಾರಿ, ಹೆಚ್ ಬಿ ಸುರೇಶ್, ಕೆಂಪ ನಾಯ್ಕ್, ಸಂತೋಷ ಕುಮಾರ್ ಶೆಟ್ಟಿ, ಯಶೋಧ ಶೆಟ್ಟಿ, ಪಕ್ಷದ ವಿವಿಧ ಘಟಕದ ಪ್ರಮುಖರು, ಜನಪ್ರತಿನಿಗಳು ಮತ್ತಿತರು ಭಾಗವಹಿಸಿದ್ದರು.