ಇನ್ನೂ ಅನಾಥವಾಗಿರುವ ಮಂಗಳೂರು ಎಪಿಎಂಸಿ ಯಾರ್ಡ್

ವಿಶೇಷ ವರದಿ

ಮಂಗಳೂರು : ಬೈಕಂಪಾಡಿಯ ವಿಶಾಲ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಈಗ ಅನಾಥವಾಗಿದ್ದರೆ, ಅತ್ತ ಬಂದರಿನ ರಖಂ ಯಾರ್ಡಿನ ರಸ್ತೆಗಳಲ್ಲಿ ವಾಹನಗಳ ಸಾಂದ್ರತೆ ಅತಿಯಾಗಿದೆ.

ಬೈಕಂಪಾಡಿಯ 80.88 ಎಕ್ರೆ ವಿಶಾಲ ಪ್ರದೇಶದಲ್ಲಿ ಯಾರ್ಡಿದೆ. ಇಲ್ಲಿ ಉತ್ತಮ ರಸ್ತೆ, ಕಟ್ಟಡಗಳು, ಉಗ್ರಾಣಗಳು, ಹರಾಜು ಪ್ಲಾಟ್‍ಫಾರ್ಮು, ನೀರಿನ ಸಂಪರ್ಕ, ಪೊಲೀಸ್ ಔಟ್‍ಪೋಸ್ಟ್ ಮತ್ತು ಇತರ ಸೇವೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ ವಿನಿಯೋಗಿಸಲಾಗಿದೆ.

ಯಾರ್ಡಿನಲ್ಲಿ ಕೇಂದ್ರ ಕಚೇರಿ ಮತ್ತು ಅತಿಥಿಗೃಹ ನಿರ್ಮಿಸಲಾಗಿದ್ದು, ಇದನ್ನು ವ್ಯಾಪಾರಿಗಳು ಮತ್ತು ಅತಿಥಿಗಳು ಬಳಸಿಕೊಳ್ಳಬಹುದಾಗಿದೆ. ಇಲ್ಲಿನ ಶೇ 90ರಷ್ಟು ಅಂಗಡಿಗಳು ಅಥವಾ ಉಗ್ರಾಣಗಳು ಬಳಸಿಕೊಳ್ಳುವವರಿಲ್ಲದೆ ಹಾಳುಬಿದ್ದಿವೆ. ಕೆಲವು ಕಟ್ಟಡಗಳು ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದ್ದರೆ, ಕೆಲವು ಅಮೂಲ್ಯ ಸಾಮಗ್ರಿಗಳು ಕಳ್ಳಕಾಕರ ಪಾಲಾಗಿವೆ. ಎಪಿಎಂಸಿಯ ಸುತ್ತ ದಟ್ಟವಾದ ಪೊದೆಗಂಟಿಗಳು ಬೇಳೆದಿದ್ದು, ಮಹತ್ವದ ಪ್ರದೇಶವೊಂದು ಹೇಗೆ ನಿರ್ಲಕ್ಷ್ಯಕ್ಕೊಳಪಟ್ಟಿದೆ ಎಂಬುದಕ್ಕೆ ಸಾಕ್ಷ್ಯಿಯಾಗಿದೆ.

ಬಂದರಿನಿಂದ ಎಲ್ಲ ವ್ಯಾಪಾರಿಗಳು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಳ್ಳಲು ಇಷ್ಟವುಳ್ಳವರಾಗಿದ್ದರೂ,  ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈಗ ಇದ್ದ ಜಾಗದಲ್ಲೇ  ತಮ್ಮ ರಖಂ ವ್ಯಾಪಾರಕ್ಕೆ ತೊಂದರೆ ರಕ್ಷಿಸಿಕೊಳ್ಳಲು ಬೈಕಂಪಾಡಿಯಲ್ಲಿರುವ ಎಪಿಎಂಸಿ ನಗರದ ಮಧ್ಯಭಾಗದಿಂದ ದೂರ ಎನ್ನುವ ಕಾರಣ ನೀಡಿ ಸ್ಥಳಾಂತರಕ್ಕೆ ವ್ಯಾಪಾರಿಗಳು ಹಿಂದೇಟು ಹಾಕಿದ್ದಾರೆ. ಇವರು ಬಂದರು ಯಾರ್ಡನ್ನು ಉಪ-ಯಾರ್ಡಾಗಿಸುವಂತೆ ಮತ್ತು ಎಪಿಎಂಸಿಯನ್ನು ಮುಖ್ಯ ಯಾರ್ಡಾಗಿಸುವಂತೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಹೈಕೋರ್ಟಿನಿಂದ ಜಯ ಸಿಕ್ಕಿದೆ. ಬಂದರಿನಲ್ಲಿ ವ್ಯಾಪಾರ ಮುಂದುವರಿಸಲು ಈ ಜಯ ಕಾರಣವಾಗಿದೆ.

ಎಪಿಎಂಸಿ ಯಾರ್ಡಿಗೆ ರಖಂ ವ್ಯಾಪಾರ ಸ್ಥಳಾಂತರಿಸುವುದಕ್ಕೆ ಜಿಲ್ಲಾಡಳಿತ ಬೆಂಬಲ ನೀಡಿದೆ. ಬಂದರಿನಲ್ಲಿರುವ ಅಗಲ ಕಿರಿದಾದ ರಸ್ತೆಗಳಿಂದಾಗಿ ಹಲವು ಸಮಸ್ಯೆಗಳು ಹುಟ್ಟಿಕೊಂಡಿದ್ದು, ಸರಕು ಸಾಗಾಟ ತೀರಾ ಹದಗೆಟ್ಟಿದೆ. ಕಾರಣ ಇಲ್ಲಿನ ರಸ್ತೆ ವಿಸ್ತರಣೆಗೆ ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ. ನಗರ ಮತ್ತು ಎಪಿಎಂಸಿಗೆ ಗಮನಾರ್ಹ  ಅಂತರವಿರುವುದರಿಂದ ಬಂದರಿನ ವ್ಯಾಪಾರಿಗಳು ಬೈಕಂಪಾಡಿಗೆ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ.

ಎಪಿಎಂಸಿ ಪ್ರದೇಶದ ಒಂದಷ್ಟು ಜಾಗದಲ್ಲಿ ಕ್ರಿಕೆಟ್ ಮೈದಾನ ನಿರ್ಮಿಸಲು ಬೇಡಿಕೆ ಬಂದಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ಹೇಳಿದ್ದಾರೆ.

ಬೇಡಿಕೆ ಮುಂದಿಟ್ಟು ಶಾಸಕ ಮೊೈದಿನ್ ಬಾವ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದಾರೆ. “ಇಲ್ಲಿ ಬಹಳಷ್ಟು ಕ್ರಿಕೆಟ್ ಪ್ರತಿಭೆಗಳಿದ್ದು, ತರಬೇತಿಗೆ ಸೂಕ್ತ ಮೈದಾನವಿಲ್ಲ. ಆದ್ದರಿಂದ ಬೈಕಂಪಾಡಿಯ ಈ ಜಾಗ ಉತ್ತಮವಾಗಿದೆ” ಎಂದು ಬಾವಾ ತಿಳಿಸಿದ್ದಾರೆ.

ಉಳಿದ ಜಾಗದಲ್ಲಿ ಟ್ರಕ್ ಟರ್ಮಿನಸ್ ನಿರ್ಮಿಸುವ ಬಗ್ಗೆ ಪ್ರಸ್ತಾವವೊಂದಿದೆ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.