ಅಪಘಾತದಲ್ಲಿ ಮಂಗಳೂರಿಗೆ 12ನೇ ಸ್ಥಾನ !

ಕರಾವಳಿ ಅಲೆ ವರದಿ

ಮಂಗಳೂರು : ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರ ಇದೀಗ ಅಪಘಾತದಲ್ಲೂ ರಾಜ್ಯದಲ್ಲಿ 12ನೇ ಸ್ಥಾನದಲ್ಲಿರುವುದು ಆತಂಕ ಸೃಷ್ಟಿಸಿದೆ.

ಇಲ್ಲಿ ಮೂರು ವರ್ಷಗಳಲ್ಲಿ ಬರೋಬ್ಬರಿ 2,185 ಅಪಘಾತಗಳಾಗಿದ್ದು, ಇದರಲ್ಲಿ 313 ಮಾರಣಾಂತಿಕ ಹಾಗೂ 1,872 ಮಾರಣಾಂತಿಕವಲ್ಲದ ಅಪಘಾತಗಳು ದಾಖಲಾಗಿವೆ. ಅಂಕಿ ಅಂಶಗಳ ಪ್ರಕಾರ ನಗರದಲ್ಲಿ (ಬಜಪೆ, ಮೂಡಬಿದಿರೆ ಹೊರತುಪಡಿಸಿ) 2015ನೇ ಇಸವಿಯಲ್ಲಿ ಒಟ್ಟಾರೆ 713 ಅಪಘಾತಗಳಾಗಿವೆ. ಇದರಲ್ಲಿ 106 ಮಾರಣಾಂತಿಕ ಅಪಘಾತವಾದರೆ 607 ಮಾರಣಾಂತಿಕವಲ್ಲದ ಅಪಘಾತಗಳಾಗಿವೆ. 2016ರಲ್ಲಿ 696 ಅಪಘಾತಗಳಾಗಿದ್ದು, ಇದರಲ್ಲಿ 95 ಮಾರಣಾಂತಿಕ ಮತ್ತು 601 ಮಾರಣಾಂತಿಕವಲ್ಲದ ಎಂದು ಗುರುತಿಸಲಾಗಿತ್ತು. 2017ರಲ್ಲಿ 776 ಅಪಘಾತಗಳಾಗಿದೆ.

ಸಂಚಾರಿ ಪೊಲೀಸರು ಅಪಘಾತಗಳನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಇಲ್ಲಿ ಪರಿಣಾಮಕಾರಿಯಾಗಿ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ನಿರ್ಲಕ್ಷ್ಯದ, ಅತೀ ವೇಗದ ಚಾಲನೆ ಅಪಘಾತಕ್ಕೆ ಪ್ರಮುಖ ಕಾರಣ. ಬೆಳಗಾವಿ ಜಿಲ್ಲೆ ಅಪಘಾತದ ಪಟ್ಟಿಯಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಅಪಘಾತದಿಂದ ಮರಣ ಹೊಂದುವ 100 ಮಂದಿಗಳ ಪೈಕಿ 3 ಮಂದಿ ಮಂಗಳೂರಿನವರು ಎಂದು ತಿಳಿದುಬಂದಿದೆ.

 

LEAVE A REPLY