ಪುತ್ತೂರು, ಮಂಗಳೂರು ವಿದ್ಯಾರ್ಥಿಗಳಿಗೆ ಒಂದು ಚಿನ್ನ, ಎರಡು ಬೆಳ್ಳಿ ಪದಕ

62ನೇ ನೇಶನಲ್ ಸ್ಕೂಲ್ ಗೇಮ್ಸ್ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್‍ಕೋಟ್ ನಗರದಲ್ಲಿ ನ 26ರಂದು ನಡೆದ 62ನೇ ಈಜು ಕ್ರೀಡಾಕೂಟದ ರಾಷ್ಟ್ರೀಯ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಪುತ್ತೂರು ಮತ್ತು ಮಂಗಳೂರಿನ ಈಜುಪಟುಗಳು ಪದಕ ಪಡೆದುಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ.

ಪುತ್ತೂರು ಎಕ್ವೇಟಿಕ್  ಕ್ಲಬ್ ಮತ್ತು ಮಂಗಳೂರು ಎಕ್ವೇಟಿಕ್ ಕ್ಲಬ್  ವಿದ್ಯಾರ್ಥಿಗಳು ಒಂದು ಚಿನ್ನ, ಎರಡು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.

14 ಹರೆಯದ ಕೆಳಗಿನ ಮಕ್ಕಳ ಕ್ರೀಡಾಕೂಟದಲ್ಲಿ ನೇಲ್ ಮಸ್ಕರೇನ್ಹಸ್ ಮೊತ್ತಮೊದಲ ಚಿನ್ನದ ಪದಕವನ್ನು 50 ಮೀಟರ್ ಬ್ರೇಸ್ಟ್ ಸ್ಟ್ರೋಕ್‍ನಲ್ಲಿ ಪಡೆದುಕೊಂಡಿದ್ದಾನೆ. ಈತ ಪುತ್ತೂರು ಸೈಂಟ್ ಫಿಲೋಮಿನಾ ಹೈಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಮನೋಹರ್ ಪ್ರಭು 50 ಮೀಟರ್ ಬ್ರೇಸ್ಟ್ ಸ್ಟ್ರೋಕ್ ವಿಭಾಗ ಹಾಗೂ ಮಂಗಳೂರು ಎಕ್ವೇಟಿಕ್ ಕ್ಲಬ್ಬಿನ ಇನ್ನೊಬ್ಬ ವಿದ್ಯಾರ್ಥಿ ಜೆವಿನ್ ಎಂ.ಯು, 4 x 100 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಜೆವಿನ್ ಮಂಗಳೂರು ಉರ್ವಾ ಕೆನರಾ ಹೈಸ್ಕೂಲ್‍ನ 8ನೇ ತರಗತಿ ವಿದ್ಯಾರ್ಥಿ.

ಈ ಮೂವರು ವಿದ್ಯಾರ್ಥಿಗಳು ಪುತ್ತೂರಿನ ಬಾಲವನ ಈಜು ಕೊಳ ಮತ್ತು ಮಂಗಳೂರಿನ ಮಂಗಳಾ ಈಜು ಕೊಳದಲ್ಲಿ  ಪಾರ್ಥ ವಾರಣಾಸಿ, ವಸಂತಕುಮಾರ್ , ನಿರೂಪ್ ಜಿ.ಆರ್., ಯಜ್ಞೇಶ್ ಮತ್ತು ರೋಹಿತ್ ಇವರಿಂದ ತರಬೇತಿ ಪಡೆದುಕೊಂಡಿದ್ದರು.