ಕಾರು ತಡೆದ ಬಿಜೆಪಿಗರಿಂದ ಕಿರಿಕರಿ: ಮಂಡ್ಯ ಎಸ್ಪಿಗೆ ಸೀಎಂ ತರಾಟೆ

ಮಂಡ್ಯ : ಇಲ್ಲಿನ ಕೆಲವು ಬಿಜೆಪಿ ಕಾರ್ಯಕರ್ತರು ನಿನ್ನೆ ತನ್ನ ಕಾರು ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕುಪಿತರಾದ ಸೀಎಂ ಸಿದ್ದರಾಮಯ್ಯ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಂಡ್ಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯನ್ನು ಸಾರ್ವಜನಿಕವಾಗಿ ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು, ಅವರ ವಿರುದ್ಧ ಕಾರ್ಯಾಚರಣೆ ನಡೆಸುವಲ್ಲಿ ವಿಫಲರಾದ 2010ರ ಬ್ಯಾಚಿನ ಐಪಿಎಸ್ ಅಧಿಕಾರಿ ರೆಡ್ಡಿಗೆ ತೀವ್ರ ಕೋಪಗೊಂಡಿದ್ದ ಸೀಎಂ ವೇದಿಕೆಗೆ ಬರುವಂತೆ ರೆಡ್ಡಿಗೆ ಸೂಚಿಸಿ ರೆಡ್ಡಿಗೆ “ನಿಷ್ಪ್ರಯೋಜಕ ವ್ಯಕ್ತಿ” ಎಂದು ಹೇಳಿ, ಅನಂತರ ಸಹನೆ ಕಳೆದುಕೊಂಡು “ಗೆಟೌಟ್”  ಎಂದು ಕೂಗಿದರು.

ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿರುವುದರಿಂದ ಇಲ್ಲಿ ಕೆಲವು ಹೊತ್ತು ಪರಿಸ್ಥಿತಿ ವಿಷಮಗೊಂಡಿತ್ತು. ಈ ಘಟನೆ ಇಲ್ಲಿನ ಶಾಂತಿ ಕಾಲೇಜು ಮೈದಾನಕ್ಕೆ ತಲುಪುವ ಮುಂಚೆ ನಡೆದಿದೆ. 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಕಾರನ್ನು ತಡೆಯಲು ಪ್ರಯತ್ನಿಸಿದ್ದರು.

LEAVE A REPLY