ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯದಿಂದ ಅಪಮಾನವೇ ಹೊರತು ಗೌರವ ಸಿಗುವುದಿಲ್ಲ

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ ಅನಿವಾರ್ಯವಿದೆಯೇ  ಭಾರತದಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬರೂ ಕೂಡಾ ಭಾರತದ ರಾಷ್ಟ್ರಗೀತೆಯ ಮೇಲೆ ಅವರದೇ ಆದ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಮನುಷ್ಯನು ರಾಷ್ಟ್ರಗೀತೆ ಆರಂಭವಾದಾಗ ಎದ್ದು ನಿಂತು ಗೌರವ ಕೊಡುವುದನ್ನು ಕಲಿತು ಕೊಂಡಿದ್ದಾನೆ ಹಾಗೂ ಅನುಸರಿಸಿದ್ದಾನೆ. ರಾಷ್ಟ್ರಗೀತೆ ಎಂಬುದು ಎಲ್ಲ ಮನದಲ್ಲಿ ನಾಟಿ ಮಾಡಿಸಿಕೊಂಡು ಅದರ ಫಲ ಪಡೆದುಕೊಳ್ಳುತ್ತಿದೆ
ಆದರೆ ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ದೇಶದ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದು ದೇಶಭಕ್ತಿ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದ ವಿಚಾರವಾಗಿದೆ  ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸುವ ಅನಿವಾರ್ಯವಿದೆಯೇ  ಚಿತ್ರಮಂದಿರಕ್ಕೆ ಬಹುತೇಕ ಮಂದಿ ಮನರಂಜನೆಗಾಗಿ  ಮನಃಶಾಂತಿಗಾಗಿ ಸಮಯವನ್ನು ಕಳೆಯುವುದಕ್ಕಾಗಿ ಅಥವಾ ಇನ್ನಾವುದೋ ಕಾರಣಕ್ಕೆ ಹೋಗುತ್ತಾರೆ
ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಸಮಯದಲ್ಲಿ ಆದೆಷ್ಟು ಮಂದಿ ಎದ್ದು ನಿಂತು ಗೌರವ ಕೊಡುತ್ತಾರೆ   ಚಿತ್ರಮಂದಿರಗಳಲ್ಲಿ ಎಲ್ಲ ವಿಧವಾದ ಚಿತ್ರಗಳನ್ನು ತೋರಿಸಲಾಗುತ್ತದೆ.  ಉದಾಹರಣೆಗೆ ನೀಲಿಚಿತ್ರ  ಅಂತಹ ಜಾಗದಲ್ಲಿ ರಾಷ್ಟ್ರಗೀತೆಗೆ ಗೌರವ ಸಿಗುತ್ತದೆಯೇ   ಚಿತ್ರಮಂದಿರಕ್ಕೆ ಹಲವಾರು ಮದ್ಯಪಾನ ಮಾಡಿ ಬರುತ್ತಾರೆ. ಅಂತಹವರಿಂದ ಗೌರವ ನಿರೀಕ್ಷೆ ಮಾಡಲು ಸಾಧ್ಯವೇ   ಚಿತ್ರಮಂದಿರದಲ್ಲಿ ಚಿತ್ರವನ್ನು ಪ್ರಸಾರ ಮಾಡುವವರು ದಿನಕ್ಕೆ ಎಷ್ಟು ಸಲ ಎದ್ದು ನಿಂತು ಗೌರವ ನೀಡುತ್ತಾನೆ
ದೇಶದ ಪ್ರಗತಿಯನ್ನು ಎತ್ತಿ ಹಿಡಿಯುವ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಿಸಬೇಕಾಗಿರುವುದು ಶಾಲಾ ಕಾಲೇಜುಗಳಲ್ಲಿ  ಸರಕಾರಿ ಕಚೇರಿಗಳಲಿ. ಏಕೆಂದರೆ ಇವತ್ತು ಕೆಲವು ಶಾಲೆಗಳಲ್ಲಿ ಸರ್ಕಾರಿ ಪದವಿ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಿಸುವುದನ್ನು ನಿಲ್ಲಿಸಿರುವ ಉದಾಹರಣೆಗಳು ಕಣ್ಣ ಮುಂದಿದೆ  ಸರಕಾರಿ ಕಚೇರಿಗಳಲ್ಲಿ ನಾ ಕಂಡಂತೆ ರಾಷ್ಟ್ರಗೀತೆಯನ್ನು ರಾಷ್ಟ್ರ ಹಬ್ಬಗಳನ್ನು ಹೊರತುಪಡಿಸಿ ಇನ್ಯಾವ ಸಮಯದಲ್ಲೂ ಹಾಡುವುದಿಲ್ಲ
ಹೀಗಿರುವಾಗ ರಾಷ್ಟ್ರಗೀತೆಯನ್ನು ಎಲ್ಲಿ ಕಡ್ಡಾಯಗೊಳಿಸಬೇಕು  ಒಟ್ಟಾರೆಯಾಗಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸುವುದರಿಂದ ರಾಷ್ಟ್ರಗೀತೆಗೆ ಹೆಚ್ಚು ಅಪಮಾನವೇ ಹೊರತು ಗೌರವ ಸಿಗುವುದಿಲ್ಲ.

  • ಚಂದ್ರಶೇಖರ, ಚಿಲಿಂಬಿ-ಮಂಗಳೂರು