ಇಕ್ಕಟ್ಟಿಗೆ ಸಿಲುಕಿದ ಗಡಿನಾಡ ಕನ್ನಡಿಗರು

ಮಲಯಾಳಂ ಕಡ್ಡಾಯ ನಿರ್ಧಾರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ನೀತಿಯು ಗಡಿನಾಡ ಕನ್ನಡಿಗರನ್ನು ಆತಂಕಕ್ಕೀಡು ಮಾಡಿದೆ.

ಇತ್ತೀಚಿನ ದಿನಗಳಲ್ಲಿ ವ್ಯಾವಹಾರಿಕ ಭಾಷೆಯಾಗಿ ಮರೆಯಾಗುತ್ತಿರುವ ಕನ್ನಡ ಕಾಸರಗೋಡಿನ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಗಡಿನಾಡಲ್ಲಿ ಕನ್ನಡದ ಅಸ್ತಿತ್ವವೇ ಅಲುಗಾಡಿದೆ. ಯಾವುದೇ ರಾಜ್ಯದಲ್ಲಿನ ಭಾಷಾ ಅಲ್ಪಸಂಖ್ಯಾತರ ರಕ್ಷಣೆಗೆ ಸಾಂವಿಧಾನಿಕ ರಕ್ಷಣೆ ಇದ್ದರೂ, ಮಲಯಾಳಂ ಭಾಷೆ ಕಡ್ಡಾಯ ನಿಯಮ ಕಾಸರಗೋಡಿನ ಕನ್ನಡಿಗರ ಚಿಂತೆಗೆ ಕಾರಣವಾಗಿದೆ.

ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಗೀಳಿನಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ಒಂದು ಕಾರಣವಾದರೆ, ಪರೋಕ್ಷ ಮಲಯಾಳೀಕರಣದ ಪ್ರಭಾವ ಗಡಿನಾಡಿನ ಕನ್ನಡಿಗರಲ್ಲಿ ನಿರಾಶೆ ಹಾಗೂ ಆತಂಕಕ್ಕೆ ಎಡೆಮಾಡಿದೆ.

ಮಲಯಾಳಂ ಕಡ್ಡಾಯಗೊಂಡಲ್ಲಿ, ಭಾಷಾ ಅಲ್ಪಸಂಖ್ಯಾತ ಅಧಿಕಾರಿಗಳ ಸೌಕರ್ಯಕ್ಕಾಗಿರುವ ಕನ್ನಡ ಬಲ್ಲ ನೌಕರ ಹಾಗೂ ಅಧಿಕಾರಿಗಳ ಹುದ್ದೆಗಳು, ಕನ್ನಡ ಬಲ್ಲ ಕಾರಣಕ್ಕೆ ಕಾಸರಗೋಡಿಗೆ ವರ್ಗಾವಣೆಗೊಳ್ಳುವ ಅವಕಾಶ ವಂಚಿತಗೊಳ್ಳುತ್ತದೆ. ಆಡಳಿತದಲ್ಲಿ ಕನ್ನಡ ಭಾಷೆಗೆ ಅವಕಾಶವೇ ಇರದು.