ಯುವತಿಯರ ಸ್ಕರ್ಟ್ ಒಳಗೆ ಇಣುಕುವ ಚಪ್ಪಲಿ ಕ್ಯಾಮರಾ ಧರಿಸಿದ್ದ ವ್ಯಕ್ತಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತ್ರಿಶ್ಶೂರಿನಲ್ಲಿ ನಡೆಯುತ್ತಿರುವ ಕೇರಳ ಕಲೋತ್ಸವಂ ಸಮಾರಂಭದಲ್ಲಿ ಭಾಗವಹಿಸುತ್ತಿದ್ದ ಬಾಲಕಿಯರು ಹಾಗೂ ಮಹಿಳೆಯರ ಫೋಟೋಗಳನ್ನು ತನ್ನ ಚಪ್ಪಲಿಯಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಫೋನಿನ ಕ್ಯಾಮರಾ ಮುಖಾಂತರ ತೆಗೆಯುತ್ತಿದ್ದ  ವ್ಯಕ್ತಿಯೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಹಳ ಚಾಣಾಕ್ಷತನದಿಂದ ತನ್ನ ಚಪ್ಪಲಿಯ ಮೇಲಿನ  ಭಾಗದಲ್ಲಿ ತೂತೊಂದನ್ನು ಮಾಡಿ ಚಪ್ಪಲಿಯ ಅಡಿ ಹಾಗೂ ಸೋಲ್ ನಡುವಿನ ಜಾಗದಲ್ಲಿ ಫೋನ್ ಸಿಕ್ಕಿಸಿ ಆತ ಈ ಕಾರ್ಯ ನಡೆಸಿದ್ದ. ತನ್ನ  ಫೋನಿಗೆ ಹಾನಿಯಾಗದಿರಲಿ ಎಂದು ಸ್ಟೀಲ್ ಕವರ್ ಕೂಡ ಆತ ಅಳವಡಿಸಿದ್ದನಲ್ಲದೆ ಈ ಫೋನಿನ ಬ್ಯಾಟರಿ ಖಾಲಿಯಾದಾಗ ಉಪಯೋಗಿಸಲು ಇನ್ನೊಂದು ಫೋನನ್ನು ತನ್ನ ಕಿಸೆಯಲ್ಲಿ ಇಟ್ಟುಕೊಂಡಿದ್ದ. ಕಲೋತ್ಸವಂ  ಸ್ಥಳದಲ್ಲಿ ಹುಡುಗಿಯರಿರುವೆಡೆಗಳಲ್ಲಿ ನುಗ್ಗಿ ಆಗಾಗ ತನ್ನ ಚಪ್ಪಲಿಯನ್ನೇ ನೋಡುತ್ತಿದ್ದ ಈತನ ಮೇಲೆ ಸಂಶಯಗೊಂಡ ಪೊಲೀಸರು ಆತನನ್ನು ಹಿಡಿದು ವಿಚಾರಿಸಿದಾಗ ಎಲ್ಲವೂ ಬಹಿರಂಗಗೊಂಡಿತ್ತು.

2015ರಲ್ಲಿ ದೆಹಲಿಯ ವಕೀಲನೊಬ್ಬ ಇದೇ ರೀತಿ ತನ್ನ ಬೂಟಿನಲ್ಲಿ ಕ್ಯಾಮರಾ ಅಳವಡಿಸಿ ಮಹಿಳೆಯರ ಬಟ್ಟೆಯೊಳಗೆ ಇಣುಕುವ ಕ್ಯಾಮರಾ ಅಳವಡಿಸಿ ಸಿಕ್ಕಿಬಿದ್ದಿದ್ದ.

LEAVE A REPLY