ಜಾಲತಾಣದಲ್ಲಿ ಕ್ರೈಸ್ತ ಧರ್ಮದ ನಿಂದಕ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿ ಧಾರ್ಮಿಕ ವಿಚಾರದ ಮೇಲೆ ದಾಳಿ ನಡೆಸುವ ಕೃತ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಕ್ರೈಸ್ತ ಧರ್ಮ ಹಾಗೂ ಮದರ್ ತೆರೇಸಾರನ್ನು ನಿಂದಿಸಿರುವುದು ಬಹಳಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸುಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೊಳಿಯಮಜಲು ಅಕ್ಷರ್ ಬಂಧಿತ ಆರೋಪಿ. ಕ್ರೈಸ್ತ ಧರ್ಮವನ್ನು ಗುರಿಯಾಗಿಟ್ಟುಕೊಂಡು ಏಸುವಿನ ನಿಂದನೆ ಮತ್ತು ಮದರ್ ತೆರೆಸಾರಿಗೆ ಅವಹೇಳನ ಮಾಡುವ ಬರೆಹಗಳನ್ನು

ಬರೆದಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಂಗಳೂರು ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಕಮಿಷನರ್ ಸುರೇಶರಿಗೆ ದೂರು ನೀಡಲಾಗಿತ್ತು.

ಇದೀಗ ದೂರಿನ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಅಕ್ಷರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುತಾಂಧ ಯುವಕನೊಬ್ಬ ಕ್ರೈಸ್ತ ಧರ್ಮ ಹಾಗೂ ಮದರ್ ತೆರೇಸಾರಿಗೆ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ಈಗ ವೈರಲ್ ಆಗಿದೆ.