ಬೈದೆತಿಗೆ ಅವಮಾನಿಸಿದವ ಬಂಧನ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ವೀರ ಪುರುಷ ಕೋಟಿ ಚೆನ್ನಯರ ತವರೂರಾದ ಪಡುಮಲೆಯ ಬಳಿ ಅರಣ್ಯ ಇಲಾಖೆಯವರು ನಿರ್ಮಿಸಿದ ಬೈದೆತಿ ಔಷಧಿ ವನದಲ್ಲಿದ್ದ ದೇಹಿ ಬೈದೆತಿಯ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೇಹಿ ಬೈದೆತಿ ಪ್ರತಿಮೆ ಬಳಿ ಕುಳಿತು ಪ್ರತಿಮೆಯ ಎದೆ ಭಾಗಕ್ಕೆ ಕೈ ಇಟ್ಟು ಈಶ್ವರಮಂಗಲದ ಹನೀಫ್ ಎಂಬ ಯುವಕ ಫೋಟೋ ಕ್ಲಿಕ್ಕಿಸಿ, ಬಳಿಕ ಆ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದ. ವಿಕೃತವಾಗಿ ವರ್ತಿಸಿದ ಯುವಕ ದೇಹಿ ಬೈದೆತಿಗೆ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಬಿಲ್ಲವ ಸಮಿತಿಯವರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃತ್ತಿಯಲ್ಲಿ ಚಾಲಕನಾಗಿದ್ದಾನೆ.