ದೀಪಕ್ ಹಂತಕರು ಬಳಸಿದ್ದ ಕಾರು ಬಾಡಿಗೆಗೆ ಪಡೆದವನ ವಿಚಾರಣೆ

ಮಂಗಳೂರು : ದೀಪಕ್ ರಾವ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹಂತಕರು ಬಳಸಿದ್ದ ಕಾರನ್ನು ಬಾಡಿಗೆಗೆ ಪಡೆದವನೆಂದು ಹೇಳಲಾದ ಅಜೀಮ್ ಎಂಬಾತನನ್ನು ವಿಚಾರಣೆಗೆ ಗುರಿ ಪಡಿಸಿದ್ದಾರೆ. ಈ ಕಾರು ಮೂಲತಃ ಮುಕ್ಕದ ಮಹಿಳೆಯೊಬ್ಬರ ಹೆಸರಿನಲ್ಲಿ ನೋಂದಣಿಯಾಗಿದ್ದು, ಆಕೆಯ ಪುತ್ರ ನಿಯಾಝ್ ಅದನ್ನು ಅಜೀಮನಿಗೆ ಬಾಡಿಗೆಗೆ ನೀಡಿದ್ದನೆನ್ನಲಾಗಿದೆ ನಿಯಾಝನನ್ನೂ ತನಿಖೆಗೆ ಒಳಪಡಿಸಲಾಗಿದ್ದು, ಅವರಿಬ್ಬರಿಗೂ ಈ ಹತ್ಯೆಗೂ ಸಂಬಂಧವಿದೆಯೇ ಎಂದು ತಿಳಿಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಹತ್ಯೆಯ ಸಂಬಂಧ ಪೊಲೀಸರು ಪಿಂಕಿ ನವಾಝ್, ನೌಶಾದ್, ರಿಜ್ವಾನ್ ಹಾಗೂ ನಿರ್ಶಾನ್ ಎಂಬ ನಾಲ್ಕು ಮಂದಿಯನ್ನು ಬಂಧಿಸಿದ್ದರೂ ಪ್ರಮುಖ ಆರೋಪಿಗಳಿಬ್ಬರೂ ಬಂಧನದ ಸಂದರ್ಭ ತಪ್ಪಿಸಿಕೊಳ್ಳಲೆತ್ನಿಸಿ ಅವರ ಮೇಲೆ ಗುಂಡು ಹಾರಿಸಬೇಕಾಗಿ ಬಂದಿದ್ದರಿಂದ ಉಂಟಾದ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ಇನ್ನೂ ವಿಚಾರಣೆಗೆ ಗುರಿ ಪಡಿಸಲಾಗಿಲ್ಲ.

 

1 COMMENT

LEAVE A REPLY