ಗೆಳೆಯರನ್ನು ಕರೆಸಿ ಪತ್ನಿ ರೇಪ್ ಮಾಡುವಂತೆ ಹೇಳುತ್ತಿದ್ದ ಪತಿ ಅರೆಸ್ಟ್

ಸಾಂದರ್ಭಿಕ ಚಿತ್ರ

ಪಾಟ್ನಾ : ಪತಿ ಮತ್ತು ಆತನ ಗೆಳೆಯರು ಹಲವಾರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿರುವುದನ್ನು ಕೊನೆಗೂ ಸಹಿಸದ ಪತ್ನಿ ದೂರು ಆಲಿಸದ ಪೆÇಲೀಸರ ವರ್ತನೆಯಿಂದ ಬೇಸತ್ತು ಕೊನೆಗೂ ಕೋರ್ಟ್ ಮೊರೆ ಹೋಗಿ ಪತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾಳೆ.

ವಿವಾಹಿತ ಮಹಿಳೆಯ ದೂರು ಸ್ವೀಕರಿಸಿದ ನ್ಯಾಯಾಲಯ, ಮಹಿಳೆಯ ಮೇಲೆ ಆಕೆಯ ಮನೆಯಲ್ಲಿಯೇ ಗ್ಯಾಂಗ್ ರೇಪ್ ಎಸಗಿದ ಆರೋಪಿ ಪತಿ ಮತ್ತು ಆತನ ಗೆಳೆಯರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಿ ಎಂದು ಪೆÇಲೀಸರಿಗೆ ಆದೇಶ ನೀಡಿದೆ.

ಪೆÇಲೀಸರು ಪ್ರಮುಖ ಆರೋಪಿ ಪತಿ ಭರತ್ ಸಿಂಗ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪರಾರಿಯಾದ ಇತರ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.