5 ಅಪರಾಧ ಪ್ರಕರಣ ಆರೋಪಿ `ಕಾಪಾ’ ನಿಯಮದಂತೆ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಐದು ಅಪರಾಧ ಪ್ರಕರಣಗಳ ಆರೋಪಿ ಕಾಞಂಗಾಡ್ ಸೌತ್ ಮುವಾರಿಕುಂಡು ನಿವಾಸಿ ರಾಜ (40) ಎಂಬಾತನನ್ನು ಪೆÇಲೀಸರು ಕಾಪಾ ನಿಯಮದಂತೆ ಬಂಧಿಸಿದರು.

ಕಾಞಂಗಾಡ್ ಸೌತ್ ಹಾಗೂ ಪರಿಸರಗಳಲ್ಲಿ ನಡೆದ ರಾಜಕೀಯ ಹಿಂಸಾಚಾರ ಸೇರಿದಂತೆ ಐದು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಕಾಞಂಗಾಡ್ ಪರಿಸರ ಪ್ರದೇಶಗಳಲ್ಲಿ ಹಿಂಸಾಚಾರ ನಡೆಸಿ ನಾಗರಿಕರಿಗೊಂದು ಸವಾಲಾಗಿದ್ದ ರಾಜನ ವಿರುದ್ದ ಪೆÇಲೀಸರು ಗೂಂಡಾ ಅಕ್ರಮಣವನ್ನು ತಡೆಗಟ್ಟುವ ಉದ್ದೇಶದಿಂದ ಕಾಪಾ ನಿಯಮವನ್ನು ಉಪಯೋಗಿಸಿ ಬಂಧಿಸಿದ್ದಾರೆ.