ಕಲ್ಲುತೂರಿ ಕೊಲೆ ಬೆದರಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮನೆ, ಔಟ್ ಹೌಸಿಗೆ ಕಲ್ಲು ತೂರಿ ಕಿಟಕಿ, ಗಾಜು, ಹೆಂಚುಗಳನ್ನು ಪುಡಿ ಮಾಡಿದ ತಂಡ ಕೊಲೆ ಬೆದರಿಕೆವೊಡ್ಡಿ 50,000 ರೂ ನಷ್ಟ ಮಾಡಿದೆ ಎಂದು ಎಂದು ಆರೋಪಿಸಿ ಜೋಡುಕಟ್ಟೆ ನಿವಾಸಿ ಬಿ.ವಿ.ಡೇಸಾ ಎಂಬವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಎಡ್ವರ್ಡ್ ಸುಮಿತ್ರಾ, ನೇಬಲ್ ಸುಮಿತ್ರಾ, ಬಸವರಾಜ ಮುದ್ದಪ್ಪ, ರೋಶನ್ ಸುಮಿತ್ರಾ, ಲವಿನಾ ಜೆನಿಫರ್ ಸುಮಿತ್ರಾ, ಪ್ರಿನ್ಸಿ ಸುಮಿತ್ರಾ ಹಾಗೂ ಆರೋಪಿತರ ಕೆಲಸದಾಳು ಮತ್ತು ಮಹಮ್ಮದ್ ಅಶ್ರಫ್ ಆರೋಪಿಗಳಾಗಿದ್ದು, ಇವರ ವಿರುದ್ಧ ಕಾನೂನು ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.