ಘರ್ಷಣೆ : ಒಬ್ಬಗೆ ಇರಿತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಮಾರಾಟ ತೆರಿಗೆ ಚೆಕ್ ಪೆÇೀಸ್ಟ್ ಬಳಿ ಮಂಗಳವಾರ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು ಒಬ್ಬನಿಗೆ ಇರಿಯಲಾಗಿದೆ.

ಮಜಿಬೈಲು ನಿವಾಸಿ ರಜಾಕ್ (28) ಎಂಬಾತ ಇರಿತದಿಂದ ಗಾಯಗೊಂಡಿದ್ದು ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ 1 ಗಂಟೆ ವೇಳೆ ಘರ್ಷಣೆ ನಡೆದಿದೆ. ಉಪ್ಪಳ ಹಾಗೂ ಮಜಿಬೈಲು ನಿವಾಸಿಗಳು ಒಳಗೊಂಡ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದೆ. ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿ ತಂಡಗಳ ಮಧ್ಯೆ ಘರ್ಷಣೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಪೆÇಲೀಸರು ತಲುಪುವಷ್ಟರಲ್ಲಿ ತಂಡಗಳು ಪರಾರಿಯಾಗಿವೆ.

ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ವ್ಯಾಪಕಗೊಂಡಿದ್ದು, ಇದರಲ್ಲಿ ವಿವಿಧ ತಂಡಗಳು ಕಾರ್ಯಾಚರಿಸುತ್ತಿವೆ. ಈ ತಂಡಗಳೊಳಗಿನ ದ್ವೇಷವೇ ಘರ್ಷಣೆಗೆ ಕಾರಣವಾಗಿದೆ. ಘರ್ಷಣೆನಿರತ ತಂಡಗಳ ಪತ್ತೆಗಾಗಿ  ಪೆÇಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.