20 ರೂ ನೋಟಲ್ಲಿ ವಿಕೃತ ಕವನ ಗೀಚಿದ ಭೂಪ

ಅಂಗಡಿ ಮಾಲಕಗೆ ಬಂದ ನೋಟಲ್ಲಿ ಬರೆದ ಕವನದ ವಿಕೃತ ಸಾಲುಗಳು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ವಿಕೃತ ಮನೋಸ್ಥಿತಿಯ ಜನ ಏನೆಲ್ಲಾ ಅವಾಂತರ ಮಾಡುತ್ತಾರೆ ಎಂಬುದಕ್ಕೆ ಬಿ ಸಿ ರೋಡಿನ ಅಂಗಡಿಯೊಂದಕ್ಕೆ ಭಾನುವಾರ ಬಂದ ನೋಟೊಂದು ಸಾಕ್ಷಿ ನುಡಿಯುತ್ತಿದೆ.

20 ರೂಪಾಯಿ ನೋಟಿನಲ್ಲಿ ಪ್ರೇಮ ಸಂಬಂಧಿ ಕವಿತೆಯೊಂದನ್ನು ಯಾರೋ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಗೀಚಿದ್ದು, ಭಾನುವಾರ ಗ್ರಾಹಕರೊಬ್ಬರು ಬಿ ಸಿ ರೋಡಿನ ಅಂಗಡಿ ಮಾಲಕಗೆ ನೀಡಿದ್ದು, ಅಂಗಡಿ ಮಾಲಕರು ಈ ನೋಟನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರದರ್ಶಿಸಿದ್ದಾರೆ.

“ಬಸ್ಸಲ್ಲಿ ಕುಳಿತಿದ್ದಳು ರೀಟಾ, ಅವಳಿಗೆ ಮಾಡಿದೆ ಟಾಟಾ, ಕಾಲಿಂದ ತೆಗೆದಳು ಬೂಟ, ನಾನು ಓಡಿದೆ 100 ಮೀ ಓಟ” ಎಂಬ ಒಕ್ಕಣೆಯ ಪ್ರಾಸಬದ್ಧ ರೀತಿಯ ವಿಕೃತ ಕವನವೊಂದನ್ನು 20 ರೂಪಾಯಿ ನೋಟಿನಲ್ಲಿ ಗೀಚಿದ್ದು, ಗ್ರಾಹಕ ಅಂಗಡಿದಾರರಿಗೆ ನೀಡಿದ ಸಂದರ್ಭ ಗಮನಕ್ಕೆ ಬಂದಿರಲಿಲ್ಲ. ಬಳಿಕ ನೋಟನ್ನು ಗಮನಿಸಿದಾಗ ಇದು ಗಮನಕ್ಕೆ ಬಂದಿದೆ. ಅಷ್ಟೊತ್ತಿಗೆ ಗ್ರಾಹಕ ಅಂಗಡಿಯಿಂದ ತೆರಳಿ ಆಗಿತ್ತು.

ಒಟ್ಟಾರೆ ವಿಕೃತ ಮನೋಸ್ಥಿತಿಯ ಮಂದಿಗಳು ತಮ್ಮ ವಿಕೃತಿ ಪ್ರದರ್ಶಿಸಲು ಸಿಕ್ಕಿದ್ದನ್ನೆಲಾ ಉಪಯೋಗಿಸುತ್ತಿದ್ದು, ನಗದು ಕರೆನ್ಸಿಯನ್ನೂ ಬಿಡದೆ ಇರುವುದು ಮಾತ್ರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.