ಗೋ ಹತ್ಯೆ ವಿರೋಧಿಸಿದ ವ್ಯಕ್ತಿಯ ಕೊಲೆ

ಸಾಂದರ್ಭಿಕ ಚಿತ್ರ

 ಲಕ್ನೋ : ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಗೋರಕ್ಷಕರಿಂದ ಮುಸ್ಲಿಂ ಯುವಕನೊಬ್ಬ ಹತ್ಯೆಗೀಡಾಗಿದ್ದಾನೆಂಬ ಆರೋಪಗಳ ನಡುವೆಯೇ ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ಲಖ್ನ ಖೇಡಾ ಗ್ರಾಮದಲ್ಲಿ ಗೋ ಹತ್ಯೆಗೆ ವಿರೋಧ ವ್ಯಕ್ತಪಡಿಸಿದ್ದಾನೆಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆಗೈಯ್ಯಲಾಗಿದೆ. ಗ್ರಾಮದ ನಿವಾಸಿ, 55 ವರ್ಷದ ನನ್ಹೇ ಆಲಿ ಎಂಬವರು  ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅದೇ ಪ್ರದೇಶದ ನಿವಾಸಿಗಳೆಂದು ಹೇಳಲಾಗಿರುವ ಮೂವರು ದುಷ್ಕರ್ಮಿಗಳು ಅವರ ಮೇಲೆ ಯದ್ವಾತದ್ವಾ ಇರಿದು ಕೊಲೆಗೈದಿದ್ದಾರೆ.