ಎಟಿಎಂ ನಂಬರ್ ಕೊಟ್ಟು ದುಡ್ಡು ಕಳೆದುಕೊಂಡರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : `ನಾನು ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಎಟಿಎಂ ಕಾರ್ಡ್  ಅವಧಿ ಕೊನೆಗೊಳ್ಳಲಿದ್ದು, ನವೀಕರಿಸಲು ಕಾರ್ಡ್ ನಂಬರ್  ಅಗತ್ಯವಿದೆ’ ಎಂದು ಹೇಳಿದ ಅನಾಮಿಕ ವ್ಯಕ್ತಿಗೆ ನಂಬರ್ ಕೊಟ್ಟ ಗ್ರಾಹಕರು ಇದೀಗ ಬ್ಯಾಂಕ್ ಖಾತೆಯಿಂದ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ.

ಚಿಕ್ಕಮಗಳೂರಿನ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಖಾತೆಯನ್ನು ಹೊಂದಿರುವ, ಮಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಕರೆ ಬಂದ ಕೇವಲ 15 ನಿಮಿಷದಲ್ಲಿ ತಮ್ಮ ಬ್ಯಾಂಕ್ ಖಾತೆಯಿಂದ 7,600 ರೂ ಕಳೆದುಕೊಂಡಿದ್ದಾರೆ. ಪಣಂಬೂರಿನ ಕೆಐಒಸಿಎಲ್ ಸಂಸ್ಥೆಯ ಟೆಕ್ನಿಕಲ್ ಟ್ರೈನಿ ಚಿಕ್ಕಮಗಳೂರು ಜಿಲ್ಲೆ ಕಳಸ ಗ್ರಾಮದ ಎಸ್‍ಬಿಐ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಜೂನ್ 14ರಂದು ಇವರ ಮೊಬೈಲ್‍ಗೆ 957230971 ನಂಬರಿನಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ವಂಚಿಸಿದ್ದ. ಇವರು ಪಿನ್ ನಂಬರ್ ಕೊಟ್ಟ ಕೇವಲ 15 ನಿಮಿಷಗಳಲ್ಲಿ ನಾಲ್ಕು ಬಾರಿ ತಲಾ 1900ರಂತೆ ಒಟ್ಟು 7600 ರೂ ಡ್ರಾ ಮಾಡಿದ ಬಗ್ಗೆ ಇವರ ಮೊಬೈಲಿಗೆ ಮೆಸೇಜ್ ಬಂದಾಗ ತಾನು ಮೋಸ ಹೋದ ಬಗ್ಗೆ ಗೊತ್ತಾಗಿದೆ.