ಮತ್ತಿನಲ್ಲಿ ಕತ್ತಿಯಿಂದ ಅಕ್ಕನ ಹೊಡೆದು ಕೊಂದ ತಮ್ಮ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಮಂಕಿಯ ಹೇರಾಡಿಯಲ್ಲಿ ರವಿವಾರ ಸತೀಶ ಮಾದೇವ ನಾಯ್ಕ ಎಂಬವನು ಕುಡಿದ ಮತ್ತಿನಲ್ಲಿ ಅಕ್ಕನನ್ನೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಹೆರಾಡಿಯ ಜ್ಯೋತಿ ನಾಯ್ಕ ಮೃತ ಯುವತಿ.

ಸತೀಶ ಮಾಧವ ನಾಯ್ಕ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿದ್ದ ಅಣ್ಣ, ಅತ್ತಿಗೆ, ತಾಯಿಯನ್ನು ಬೆದರಿಸಿದ್ದಾನೆ. ಕೋಣೆಯೊಂದರಲ್ಲಿ ಅಡಗಿ ಕುಳಿತ್ತಿದ್ದ ಭಿನ್ನಚೇತನೆ ಅಕ್ಕನಿಗೆ ಕತ್ತಿಯಿಂದ ಕುತ್ತಿಗೆಯ ಎಡಭಾಗದಲ್ಲಿ ಕಡಿದು ಕೊಲೆಗೈದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY