ಗೇರುಬೀಜ ಘಟಕದಿಂದ ಕಳವು : ಆರೋಪಿಗೆ 6 ವರ್ಷ ಸಜೆ, ದಂಡ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತೆಕ್ಕಿಲ್ ಕುನ್ನಾರದಲ್ಲಿ ಕಾರ್ಯಚರಿಸುತ್ತಿರುವ ಸಫಲಂ ಮಹಿಳಾ ಗೇರುಬೀಜ ಸಂಘದ ಗೇರುಬೀಜ ಪೆÇ್ರಸೆಸಿಂಗ್ ಘಟಕಕ್ಕೆ 2010 ಆಗಸ್ಟ್ 28 ಮತ್ತು 30ರ ನಡುವೆ ನುಗ್ಗಿ 1,348.54 ಕಿಲೋ ಗೇರುಬೀಜವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಕಾಸರಗೋಡು ಚೀಫ್ ಜ್ಯೂಡಿಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ 2 ಸೆಕ್ಷನ್ನುಗಳಲ್ಲಿ ತಲಾ 3 ವರ್ಷ ಸಜೆ ಮತ್ತು ತಲಾ 5 ಲಕ್ಷ ರೂ ದಂಡ ಸಹಿತ ಒಟ್ಟೂ 6 ವರ್ಷ ಕಠಿಣ ಸಜೆ ಮತ್ತು 10 ಲಕ್ಷ ರೂ ದಂಡ ವಿಧಿಸಿದೆ.

ಕಳನಾಡು ಚೆಂಬರಿಕ ಕಲ್ಲುವಳಪ್ ಕಾಲನಿಯ ಅಶ್ರಫ್ ಕೆ ಮತ್ತು ಚೆಂಗಳ ಚೇರೂರು ಉಕ್ಕಂಪಟ್ಟಿ ಹೌಸಿನ ಅಲ್ತಾಫ್ ಯು ಎ.ಗೆ ಈ ಸಜೆ ವಿಧಿಸಲಾಗಿದೆ. ಈ ಘಟಕದಿಂದ ಗೇರುಬೀಜ ಸಹಿತ ಅಳತೆ ಯಂತ್ರ, ಕಂಪ್ಯೂಟರ್ ಮೊದಲಾದವು ಕಳವು ಮಾಡಲಾಗಿದ್ದು ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು.