ಗೆಳತಿಯ ರೇಪ್ ಮಾಡಲು ಸ್ನೇಹಿತರನ್ನು ಕರೆದ ಕಾಮುಕ

ಸಾಂದರ್ಭಿಕ ಚಿತ್ರ

ಶಿಮ್ಲಾ : ಶಾಲಾ ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿದ ಪರಿಚಿತ ಕಾಮುಕನೊಬ್ಬ ತನ್ನ ಐವರು ಸ್ನೇಹಿತರೊಂದಿಗೆ ಆಕೆಯ ಮೇಲೆ ಗ್ಯಾಂಗ್ ರೇಪ್ ಎಸಗಿ ಭೀಕರವಾಗಿ ಹತ್ಯೆಗೈದು ಪರಾರಿಯಾದ ಘಟನೆ ವರದಿಯಾಗಿದೆ.

15 ವರ್ಷದ ಶಾಲಾ ಬಾಲಕಿಯ ಶವ ದೊರೆಯುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಬಾಲಕಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ನಗರದಲ್ಲಿ ಕೋಲಾಹಲ ಸೃಷ್ಟಿಸಿದ್ದರು.

ಬಾಲಕಿಯ ಕುಟುಂಬಕ್ಕೆ ಆತ್ಮಿಯನಾಗಿದ್ದ ಮುಖ್ಯ ಆರೋಪಿ ರಾಜೀಂದರ್ ಸಿಂಗ್, ಬಾಲಕಿಯನ್ನು ಫುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ನಂತರ ತನ್ನ ಐವರು ಗೆಳೆಯರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಎಲ್ಲರು ಸೇರಿ ಗ್ಯಾಂಗ್‍ರೇಪ್ ಎಸಗಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ಬಾಲಕಿ ಯಾರಿಗಾದರೂ ಮಾಹಿತಿ ನೀಡಬಹುದು ಎನ್ನುವ ಆತಂಕದಿಂದ ಆರೋಪಿಗಳು ಆಕೆಯನ್ನು ಹತ್ಯೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಶಾಲೆಯಿಂದ ಬಾಲಕಿ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಆಕೆಯ ಕುಟುಂಬದವರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯಾದ ಎರಡು ದಿನಗಳ ನಂತರ ಹಲಿಯಾಲಾ ಅರಣ್ಯ ಪ್ರದೇಶದಲ್ಲಿ ನಗ್ನಳಾಗಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಒಂದು ವಾರದ ನಂತರ ಪೆÇಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ  ಇಬ್ಬರು ಆರೋಪಿಗಳು ನೇಪಾಳಿಗರಾಗಿದ್ದು, ಮತ್ತಿಬ್ಬರು ಆರೋಪಿಗಳು ಉತ್ತರಾಖಂಡ್ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.