ಐ ಫೋನ್ ಚಾರ್ಜರ್ ಸ್ಫೋಟ

ವ್ಯಕ್ತಿಗೆ ಸುಟ್ಟ ಗಾಯ

ಬೋಸ್ಟನ್ : ಹನ್ಸ್‍ವಿಲೆಯ ನಿವಾಸಿ ವಿಲಿ ಡೇ ಎಂಬಾತ ತನ್ನ ಹಾಸಿಗೆಯ ಬಳಿ ಐಫೋನಿಗೆ ಚಾರ್ಜರ್ ಅಳವಡಿಸಿ ಇಟ್ಟಿದ್ದಾಗ,  ಚಾರ್ಜರ್ ಸ್ಪೋಟಗೊಂಡಿರುವುದು ವರದಿಯಾಗಿದೆ. ಸುಟ್ಟ ಗಾಯಗಳಿಂದ ಪರದಾಡುತ್ತಿದ್ದ ವಿಲಿ ಡೇ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಮೈಯ್ಯೆಲ್ಲಾ ಜಡಗಟ್ಟಿದ್ದ ವಿಲಿ ಡೇ ಅವರನ್ನು ಎಚ್ಚಿರಿಸಿದಾಗ ನಿಲ್ಲಲಾರದೆ ನೆಲಕ್ಕೆ ಬಿದ್ದಿದ್ದ ಎಂದು ವೈದ್ಯರು ಹೇಳಿದ್ದಾರೆ.

ತಮ್ಮ ಕತ್ತಿನ ಸುತ್ತಲೂ ತೀವ್ರ ಒತ್ತಡ ಹೇರಿದಂತಾಗುತ್ತಿತ್ತು ಎಂದು ಹೇಳಿರುವ ವಿಲಿ ಡೇ ಬದುಕಿ ಉಳಿದಿರುವುದೇ ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ. ಈಗ ತಮ್ಮ ಅಡುಗೆ ಮನೆಯಲ್ಲಿ ಐ ಫೋನಿಗೆ ಚಾರ್ಜರ್ ಅಳವಡಿಸಲು ಆರಂಭಿಸಿರುವ ವಿಲಿ ಡೇ ಯಾರೇ ಆದರೂ ತಮ್ಮ ಮೊಬೈಲ್ ಮತ್ತು ಐ ಫೋನ್‍ಗಳನ್ನು ತಾವು ಮಲಗುವ ಹಾಸಿಗೆಯ ಬಳಿ ಚಾರ್ಜ್ ಮಾಡದಿರುವಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಚಾರ್ಜ್ ಮಾಡಲಾಗುತ್ತಿರುವ ಮೊಬೈಲ್ ಮೂಲಕ ಮಾತನಾಡಲು ಹೋಗಿ ಸ್ಪೋಟದಿಂದ ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟು ನಡೆಯುತ್ತಿದ್ದು ಈ ಘಟನೆಯೂ ಕಣ್ತೆರೆಸುವಂತಿದೆ.