ಕೊಲೆಗಾರಗೆ ಜೀವಾವಧಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ: ಅನೈತಿಕ ಸಂಬಂಧದ ಅನುಮಾನದ ಹಿನ್ನಲೆ ನಡೆದ ಕೊಲೆ ಪ್ರಕರಣ ಸಂಬಧಿಸಿದ ಆರೋಪಿ ಶರತ್ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾದಿ ಶಿಕ್ಷೆಯ ತೀರ್ಪು ನೀಡಿದೆ.


ಕೋಟ ತಾಣ ವ್ಯಾಪ್ತಿಯ ಸಾಲಿಗ್ರಾಮ ಕಾರ್ಕಡದ ವಿಜಯ್ ಅಪರಾಧಿ ಶರತ್ ಮನೆಯ ಸಮೀಪದ ನಿವಾಸಿಯಾಗಿದು
ಯಾವಾಗಲು ಶರತ್ ಮನೆಗೆ ಬಂದು ಹೋಗುತ್ತಿದ್ದ. ಈ ಸಂದರ್ಭ ವಿಜಯ್ ಕಾರಂತಗೆ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಕುರಿತು ಶರತಗೆ ಅನುಮಾನ ಮೂಡಿದ್ದು, ಈ ಹಿನ್ನೆಲೆಯಲ್ಲಿ ಹಲವು ಬಾರಿ ವಿಜಯಗೆ ಎಚ್ಚರಿಕೆಯನ್ನೂ ನೀಡಿದ್ದ, ಆದರೂ ಶರತನ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ವಿಜಯ್ ವಿರುದ್ಧ ಆಕ್ರೋಶಿತನಾದ ಶರತಗೆ ಇವನನ್ನು ಹೀಗೇ ಬಿಟ್ಟರೆ ಮುಂದೆ ನನ್ನ ಮರ್ಯಾದೆ ಬೀದಿಗೆ ಬರುತ್ತದೆ ಎಂದು ಭಾವಿಸಿ, 2015ರ ಫೆಬ್ರವರಿ 2 ಮಧ್ಯಾಹ್ನ 11:30ರ ಸುಮಾರಿಗೆ ವಿಜಯ್ ಕಾರಂತನ ಎದೆಯ ಎಡ ಪಕ್ಕೆಲುಬಿಗೆ ಚೂರಿಯಿಂದ ಇರಿದಿದ್ದ. ಇದರಿಂದ ತೀವ್ರ ಗಾಯಗೊಂಡ ವಿಜಂiÀiನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಈ ಪ್ರಕರಣವನ್ನು ತನಿಖೆ ನಡೆಸಿದ ಬ್ರಹ್ಮಾವರದ ಅಂದಿನ ವೃತ್ತ ನಿರೀಕ್ಷಕ ಅರುಣ್ ನಾಯಕ್, 18 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಾಕ್ಷ್ಯಗಳು ಇವನ ಮೇಲಿನ ಆರೋಪವನ್ನು ಸಾಬೀತುಪಡಿಸಿದ ಹಿನ್ನೆಲೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪ್ರಕಾಶ್ ಕೆ ವಿಜಯ್ ಕಾರಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಶರತಗೆ ಜೀವಾವಧಿ ಶಿಕ್ಷೆ ಮತ್ತು 40,000 ರೂ ದಂಡ ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಸೆಕ್ಷನ್ 201ರಡಿ 3 ವರ್ಷ ಕಠಿಣ ಸಜೆ ಮತ್ತು 10,000 ರೂ ದಂಡ ವಿಧಿಸಿದ್ದಾರೆ.