ಮಗಳು, ಆಕೆಯ ಪ್ರಿಯಕರನ ಕೊಂದಾತನಿಗೆ ಜೀವಾವಧಿ ಶಿಕ್ಷೆ

ಗ್ರೇಟರ್ ನೋಯ್ಡಾ : ಮಗಳು ಮತ್ತು ಆಕೆಯ ಪ್ರಿಯಕರನನ್ನು ಕೊಂದಾತನಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಆರೋಪಿ ರಾಜಕುಮಾರ್ ಎಂಬಾತ ಮಗಳು 17ರ ಹರೆಯದ ವರ್ಷಾ ಮತ್ತು  ಆಕೆಯ ಪ್ರಿಯಕರ 26 ವರ್ಷದ ಗುಲಾಬ್ ಅಹ್ಮದ್ ಎಂಬಾತನನ್ನು 2014 ರ ಜುಲೈಯಲ್ಲಿ ಕೊಲೆ ಮಾಡಿದ್ದನು. 2014ರ ಜುಲೈ 26ರಂದು ಆತನನ್ನು ಪೊಲೀಸರು ಬಂಧಿಸಿ ಆತನ ವಿರುದ್ದ ಐಪಿಸಿ ಸೆಕ್ಷನ್ 302 ಅಡಿಯಲ್ಲಿ 2015ರ ಮಾರ್ಚ್ 2 ರಂದು ಚಾರ್ಜ್‍ಶೀಟ್ ಸಲ್ಲಿಸಿದ್ದರು.