ಗುರುಪುರ ನದಿಯಲ್ಲಿ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳವಾರದಿಂದ ನಾಪತ್ತೆಯಾಗಿದ್ದ ಜಾರ ನಿವಾಸಿ ಸತೀಶ್ ಶೆಟ್ಟಿ(45) ಅವರ ಮೃತದೇಹ ಮೂಡುಶೆಡ್ಡೆ ಬಳಿಯ ಗುರುಪುರ ನದಿಯಲ್ಲಿ ಪತ್ತೆಯಾಗಿದೆ. ಬೀದಿ ದೀಪ ಸ್ವಿಚ್ ಹಾಕುವ ಕೆಲಸ ಮಾಡುತ್ತಿದ್ದ ಇವರು ಕಳೆದ ಮಂಗಳವಾರ ರಾತ್ರಿ 11 ಗಂಟೆಗೆ ಮನೆಯಿಂದ ಹೋದವರು ಬಳಿಕ ನಾಪತ್ತೆಯಾಗಿದ್ದರು. ಬುಧವಾರ ಇವರ ಮೃತದೇಹ ಗುರುಪುರ ನದಿಯಲ್ಲಿ ಕಂಡು ಬಂದಿದೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.