ಕಾಡಿನಲ್ಲಿ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಕಚ್ಚೂರು ಎಂಬಲ್ಲಿನ ಕಾಡಿನಲ್ಲಿ ಸಂಜೀವ ಮೊಗೇರ ಎಂಬವರು ಶವವಾಗಿ ಪತ್ತೆಯಾಗಿದ್ದಾರೆ.

ಸಂಜೀವ ಮೊಗೇರ ನಿಗೂಢವಾಗಿ ಮೃತಪಟ್ಟಿದ್ದು ಈ ಸಾವು ಆತ್ಮಹತ್ಯೆಯೋ, ಆಕಸ್ಮಿಕವಾಗಿ ಸಂಭವಿಸಿದೆಯೋ ಎಂಬಿತ್ಯಾದಿ ಕುತೂಹಲ ಸ್ಥಳೀಯರಲ್ಲಿ ಮೂಡಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.