ಚಿನ್ನದ ಸರ ಕಸಿದು ಪರಾರಿ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ  ವರದಿ

ಮಂಗಳೂರು : ಬೈಕಿನಲ್ಲಿ ಬಂದ ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಎರಡು ಪವನ್ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ಪಿವಿಎಸ್ ವೃತ್ತದ ಬಳಿ ಮಂಗಳವಾರ ಬೆಳಿಗ್ಗೆ ಕಂದುಕ ನಿವಾಸಿ ಸುಂದರಿ ಎಂಬವರು ಸರವನ್ನು ಕಳೆದುಕೊಂಡವರು.

ಪಿವಿಎಸ್ ವೃತ್ತ ಬಳಿ ಇರುವ ಜಿಮ್‍ನಲ್ಲಿ ಉದ್ಯೋಗಿಯಾಗಿರುವ ಸುಂದರಿ, ಕಚೇರಿಗೆ ತೆರಳುತ್ತಿದ್ದಾಗ ಬೈಕ್‍ನಲ್ಲಿ ಬಂದ ಹೆಲ್ಮೆಟ್‍ಧಾರಿ ಯುವಕರು ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಕಿತ್ತು ಪರಾರಿಯಾಗಿದ್ದಾರೆ.

 

LEAVE A REPLY