ತೆಂಗಿನಮರದಿಂದ ಬಿದ್ದು ವ್ಯಕ್ತಿ ಮೃತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತೆಂಗಿನಮರದಿಂದ ಬಿದ್ದು ಪೇರಾಲಿನ ಮರವೇರುವ ಕಾರ್ಮಿಕ ಪಿ ಎಸ್ ಗಣೇಶ್ (34) ಸಾವಿಗೀಡಾದರು. ಎರಿಯಾಲಿನಲ್ಲಿ ತೆಂಗಿನಮರವೇರುತ್ತಿದ್ದಾಗ ಮರದಲ್ಲಿದ್ದ ಕಣಜದ ಹುಳುಗಳ ದಾಳಿಗೊಳಗಾದ ಗಣೇಶ್ ಕೆಳಗೆ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.