ಕುಡಿತದ ಅಮಲಿನಲ್ಲಿ ರೈಲ್ವೇ ಸೇತುವೆಯಿಂದ ಬಿದ್ದು ಸಾವು

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ನೆಟ್ಟಣ ರೈಲ್ವೇ ನಿಲ್ದಾಣದ ಬಳಿಯಿಂದ ಓಟಕಜೆ ದಾರಿ ಮಧ್ಯೆಯಿರುವ ರೈಲ್ವೇ ಸೇತುವೆಯಿಂದ ಕೆಳೆಗೆ ಬಿದ್ದು ಸುನಿಲ್ (26) ಎಂಬಾತ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.ಮೃತ ಸುನಿಲ್ ಮಧ್ಯಪ್ರದೇಶದ ಜಬ್ಬಲಪುರ ಮೂಲದ ನಿವಾಸಿ ಎನ್ನಲಾಗಿದ್ದು, ಈತ ನೆಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಭಾನುವಾರ ರಾತ್ರಿ ಸೇತುವೆ ಮೇಲಿಂದ ಕುಡಿತದ ಅಮಲಿನಲ್ಲಿ ನಡೆದು ಹೋಗುತ್ತಿದ್ದ ಸಂದರ್ಭ ಕೆಳಗೆ ಬಿದ್ದು ಮೃತಪಟ್ಟಿದ್ದು, ಸೋಮವಾರ ಬೆಳಕಿಗೆ ಬಂದಿದೆ. ಮೃತರ ಸಂಬಂಧಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.