ಬಾವಿಗೆ ಆಕಸ್ಮಿಕ ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೇಲು ನಿವಾಸಿ ಡೊಂಬಯ್ಯ ಗೌಡ (36) ಎಂಬವರು ಮನೆ ಎದುರಿನ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸೋಮವಾರ ರಾತ್ರಿ ಮೃತಪಟ್ಟ ಘಟನೆ ನಡೆದಿದೆ.

ಇಲ್ಲಿನ ನಿವಾಸಿ ದಿವಂಗತ ಗಂಗಯ ಗೌಡ ಅವರ ಪುತ್ರನಾಗಿರುವ ಡೊಂಬಯ ಗೌಡ ಅವಿವಾಹಿತರಾಗಿದ್ದು, ಕೂಲಿ ಕಾರ್ಮಿಕರಾಗಿದ್ದರು. ಸೋಮವಾರ ರಾತ್ರಿ ಕೆಲಸ ಬಿಟ್ಟು ಮನೆಗೆ ಬಂದ ಇವರು ಮನೆಯಂಗಳದಲ್ಲಿರುವ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಸದ್ದು ಕೇಳಿದ ಮನೆ ಮಂದಿ ತಕ್ಷಣ ಹೊರಬಂದು ನೋಡಿದ್ದಾರಾದರೂ ಅದಾಗಲೇ ಡೊಂಬಯ್ಯ ಗೌಡ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋಗಿದ್ದರು ಎನ್ನಲಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಮೇಲೆತ್ತಿದ್ದಾರೆ.