ತನಗೆ ಸೌಲಭ್ಯ ಸಿಗದಿದ್ದಕ್ಕೆ ಕೋಪದಿಂದ ಬೇರೆ ಮನೆಯ ಗ್ಯಾಸ್ ಸ್ಟೌ ಕಿತ್ತೊಯ್ದ !

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಗ್ರಾಮದ ಅರ್ತಿಲ ಎಂಬಲ್ಲಿ ಬಡ ಮಹಿಳೆಯರು ಕಟ್ಟಿಗೆ ಒಲೆಯ ಹೊಗೆ ತಿಂದು ಸಂಕಷ್ಟ ಪಡಬಾರದೆಂದು ಪ್ರಧಾನಿ ಜಾರಿಗೆ ತಂದ ಉಜ್ವಲ ಎಂಬ ಗ್ಯಾಸ್ ಸ್ಟೌ ಕೊಡುಗೆಯ ಫಲಾನುಭವಿಯ ಮನೆಯಿಂದಲೇ ಬೇರೆಯವರು ಗ್ಯಾಸ್ ಸ್ಟೌ ಕಿತ್ತೊಯ್ದಿದ್ದಾರೆ. ಅರ್ತಿಲ ನಿವಾಸಿ ರಾಜು ನಾಯ್ಕ ಎಂಬವರ ಪತ್ನಿ ಗೀತಾ ಎಂಬವರಿಗೆ ಸರಕಾರದ ಈ ಉಜ್ವಲ

ಯೋಜನೆಯಲ್ಲಿ ಗ್ಯಾಸ್ ಸ್ಟೌ ಮಂಜೂರಾಗಿದ್ದು, ಅದನ್ನು ಬುಧವಾರದಂದು ಉಪ್ಪಿನಂಗಡಿ ಪಂಚಾಯತ್ ಕಚೇರಿಯಿಂದ ಪಡೆದು ಸಂತಸ ಸಂಭ್ರಮದಲ್ಲಿ ತನ್ನ ಮನೆಗೆ ತಂದಿರಿಸಿದ್ದರು. ಆದರೆ ರಾಜು ನಾಯ್ಕ ಅವರ ಸಹೋದರ ಆನಂದ ನಾಯ್ಕ ಎಂಬವರು ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅದರೆ ಈ ಬಾರಿಯ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ಕುಪಿತಗೊಂಡ ಆನಂದ ನಾಯ್ಕ ತನಗೆ ದೊರೆಯದ ಸೌಲಭ್ಯ ನಿಮಗೂ ದೊರೆಯಬಾರದೆಂದು ವಾದಿಸಿ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿ ತಂದಿರಿಸಿದ್ದ ಗ್ಯಾಸ್ ಸ್ಟೌ ಬಲವಂತಿಕೆಯಿಂದ ಕೊಂಡೊಯ್ದಿದ್ದಾನೆಂದು ಗೀತಾ ಉಪ್ಪಿನಂಗಡಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.