ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮನೆಯೊಂದರ ಸಮೀಪದ ಗೇರು ಮರದ ರೆಂಬೆಗೆ ಕಳತ್ತೂರು ಕನಿಯಡ್ಕ ನಿವಾಸಿ ವಿಶ್ವಂಭರ (56) ಎಂಬಾತ ನೇಣುಬಿಗಿದು ಸತ್ತಿದ್ದಾನೆ.

ನಾಪತ್ತೆಯಾದ ವಿಶ್ವಂಭರನನ್ನು ಹುಡುಕಾಡುತಿದ್ದ ಮಧ್ಯೆ ಮನೆ ಸಮೀಪದ ಗೇರುಬೀಜದ ಮರವೊಂದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.